
ಕಲಬುರಗಿ: ಕೋಳಕೂರ ಗ್ರಾಮದಲ್ಲಿ ನೀರಿನ ಸಂಪ್ ಗೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕೋಳಕೂರ ಗ್ರಾಮದಲ್ಲಿ ಘಟನೆ ನಡೆದಿದೆ.
ಆಟವಾಡುತ್ತಿದ್ದ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಗಿರೀಶ್(3), ಶ್ರೇಷ್ಟಾ(2) ಮೃತಪಟ್ಟ ಮಕ್ಕಳು ಎಂದು ಹೇಳಲಾಗಿದೆ. ಮನೆಯ ಬಳಿ ಇದ್ದ ನೀರಿನ ಸಂಪ್ ನಲ್ಲಿ ಮಕ್ಕಳಿಬ್ಬರ ಮೃತ ದೇಹ ಪತ್ತೆಯಾಗಿದೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.