ಬೆಂಗಳೂರು: ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಕೆ ಮಾಡುವವರಿಗೆ ಏಪ್ರಿಲ್ 14ರಿಂದ ಶೇಕಡ 10ರಷ್ಟು ನೀರು ಪೂರೈಕೆ ಕಡಿತಗೊಳಿಸಲಾಗುವುದು.
ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮಪ್ರಸಾತ್ ಜಲ ಮಂಡಳಿಯ ಕೇಂದ್ರ ಕಚೇರಿಯಲ್ಲಿ 20 ಲಕ್ಷದಿಂದ 40 ಲಕ್ಷ ಲೀಟರ್ ನೀರು ಬಳಕೆದಾರರ ಸಭೆ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಜಲಮಂಡಳಿಯಿಂದ ತಿಂಗಳಿಗೆ 20 ಲಕ್ಷದಿಂದ 40 ಲಕ್ಷ ಲೀಟರ್ ಬಳಸುವವರಿಗೆ ಏಪ್ರಿಲ್ 14 ರಿಂದ ಶೇಕಡ 10ರಷ್ಟು ನೀರು ಕಡಿತಗೊಳಿಸಲಾಗುತ್ತದೆ. ಪಂಚಸೂತ್ರ ಅಳವಡಿಸಿಕೊಳ್ಳುವುದರಿಂದ ಶೇಕಡ 10 ರಷ್ಟು ನೀರು ಉಳಿತಾಯವಾಗಲಿದ್ದು, ಹೀಗೆ ಕಡಿತ ಮಾಡಿದ ನೀರನ್ನು ಅಗತ್ಯವಿರುವ ಪ್ರದೇಶಗಳಿಗೆ ಪೂರೈಸಲಾಗುವುದು ಎಂದು ತಿಳಿಸಿದ್ದಾರೆ.
ಸಂಸ್ಕರಿಸಿದ ನೀರು ಹೆಚ್ಚಾಗಿ ಲಭ್ಯವಿದ್ದು, ಅದರ ಮಾರುಕಟ್ಟೆ ಹೆಚ್ಚಿಸುವ ನಿಟ್ಟಿನಲ್ಲಿ ಸಣ್ಣ ಕೈಗಾರಿಕೆಗಳು, ಎಫ್.ಕೆ.ಸಿ.ಸಿ. ಜತೆ ಸಭೆ ನಡೆಸಲಾಗುವುದು ಎಂದು ಹೇಳಿದ್ದಾರೆ.