ಬೆಂಗಳೂರು : ರಾಜ್ಯದ ಜನತೆಗೆ ವಾಟರ್ ಶಾಕ್ ಎದುರಾಗಿದ್ದು, ಸರ್ಕಾರ ಕುಡಿಯುವ ನೀರಿನ ತೆರಿಗೆ ಹೆಚ್ಚಳ ಮಾಡಿದೆ.
ಕೈಗಾರಿಕೆಗಳಿಗೆ ಕೆರೆ, ನಾಲೆ, ಜಲಾಶಯಗಳಿಂದ ಒದಗಿಸುವ ನೀರಿನ ಕರ ಹೆಚ್ಚಳ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಪ್ರತಿ ಎಂಸಿಎಫ್ಟಿ ನೀರಿಗೆ ಇದೆ ಸದ್ಯದ 50,000 ರೂ. ರಾಜಧನ, ಇದನ್ನು 3 ಲಕ್ಷ ರೂ.ಗೆ ಹೆಚ್ಚಿಸಲು ಸಂಪುಟ ಸಭೆ ತೀರ್ಮಾನ ಮಾಡಿದೆ.
ಹೌದು, ಗೃಹ ಉಪಯೋಗ ಬಳಕೆ ನೀರಿನ ಮೇಲಿನ ತೆರಿಗೆ ಹೆಚ್ಚಳಕ್ಕೆ ನಿನ್ನೆ (ಗುರುವಾರ) ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಜನರಿಗೆ ಕುಡಿಯುವ ನೀರು ದುಬಾರಿಯಾಗಲಿದೆ. ಕೈಗಾರಿಕೆಗಳಿಗೆ ನೀಡುವ ನೀರಿನ ಜೊತೆಗೆ ಗೃಹ ಬಳಕೆ ನೀರಿಗೂ ಟ್ಯಾಕ್ಸ್ ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಹೊಸ ತೆರಿಗೆ ಪ್ರಕಾರ ಗೃಹ ಬಳಕೆ ನೀರಿಗೆ ಪ್ರತಿ MCFTಗೆ (Million Cubic Feet) 320 ರೂ. ಟ್ಯಾಕ್ಸ್ ಹೆಚ್ಚಳವಾಗಲಿದೆ.