ಆಗ್ನೇಯ ಯೂರೋಪ್ ನ ಮೊಂಟೆನೆಗ್ರೋದಲ್ಲಿನ ಹಿಪ್ಪು ನೇರಳೆ ಮರದಿಂದ ನೀರು ಹರಿದು ಬರುತ್ತಿರುವುದು ವಿಸ್ಮಯ ಮೂಡಿಸಿದೆ. ಮರದಿಂದ ನೀರು ಬರುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಈ ಮರದಿಂದ ಅದ್ಹೇಗೆ ನೀರು ಬರಲು ಸಾಧ್ಯ ಎಂಬ ಪ್ರಶ್ನೆಯೊಂದಿಗೆ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ.
ಅಂದಹಾಗೆ, ಹಿಪ್ಪುನೇರಳೆ ಮರದಿಂದ ನೀರು ಬರುತ್ತಿರುವುದು ಇದು ಮೊದಲೇನಲ್ಲ. ಪ್ರತಿವರ್ಷ ಒಂದೆರಡು ಮರಗಳಿಂದ ಹೀಗೆಯೇ ನೀರು ಬರುವುದು ವಾಡಿಕೆಯಾಗಿದೆಯಂತೆ !
BIG BREAKING: ಒಂದೇ ದಿನದಲ್ಲಿ 3,545 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢ; 19,688 ಸಕ್ರಿಯ ಪ್ರಕರಣ ದಾಖಲು
ಈ ಅಚ್ಚರಿಯ ಬೆಳವಣಿಗೆಯ ಹಿಂದೆ ವಿಜ್ಞಾನ ಏನು ಹೇಳುತ್ತದೆ ಎಂದು ನೋಡುವುದಾದರೆ:- ಮೊಂಟೆನೆಗ್ರೋದ ರಾಜಧಾನಿ ಪೊಡ್ಗೋರ್ಸಿಯಾ ನಗರದ ಸನಿಹದಲ್ಲಿರುವ ಡೈನೋಸ ಎಂಬ ಹಳ್ಳಿಯ ಸುತ್ತಮುತ್ತ ಸಾಕಷ್ಟು ತೊರೆಗಳಿವೆ. ಭಾರೀ ಮಳೆ ಬಂದ ಸಂದರ್ಭದಲ್ಲಿ ತೊರೆಗಳು ಉಕ್ಕಿ ಹರಿಯುತ್ತವೆ. ಈ ನೀರು ಮಲ್ಬರಿ(ಹಿಪ್ಪು ನೇರಳೆ) ಮರಗಳನ್ನು ಮುಳುಗಿಸುವ ರೀತಿಯಲ್ಲಿ ಹರಿಯುತ್ತದೆ. ಹೀಗೆ ಹರಿದ ನೀರು ಮರದ ಕೆಳಗಿನಿಂದ ಅದರಲ್ಲಿನ ಟೊಳ್ಳುಗಳಿಗೆ ಹೋಗಿ ಶೇಖರಣೆಯಾಗುತ್ತದೆ.
ಟೊಳ್ಳುಗಳಲ್ಲಿ ಶೇಖರಣೆಯಾಗದ ನೀರು ಹೊರ ಬರಲಾರಂಭಿಸುತ್ತದೆ. ನಲ್ಲಿಯ ರೀತಿಯಲ್ಲಿ ನೀರು ಬರಲಾರಂಭಿಸುತ್ತದೆ. ಹೀಗೆ ಒಂದೆರಡು ದಿನಗಳವರೆಗೆ ನೀರು ಬರಲಿದ್ದು, ಒತ್ತಡ ಮತ್ತು ನೀರು ಕಡಿಮೆಯಾದ ನಂತರ ನಿಲ್ಲುತ್ತದೆ.