ಆಕರ್ಷಣೀಯ ಮತ್ತು ವಿಚಿತ್ರ ಶೈಲಿಯ ನಟನೆಯಿಂದ ಬಾಲಿವುಡ್‌ನಲ್ಲಿ ಗಂಭೀರ ಪಾತ್ರಗಳ ಸರದಾರ ಎಂದೇ ಖ್ಯಾತಿ ಪಡೆದಿರುವ ನಟ ನವಾಜುದ್ದೀನ್ ಸಿದ್ದಿಕಿ. ಬಾಡಿ ಲ್ಯಾಂಗ್ವೇಜ್, ಮುಖಚರ್ಯೆಯಲ್ಲಿ ನಟನೆಯೇ ಇವರ ಪ್ಲಸ್ ಪಾಯಿಂಟ್‌ಗಳು. ಇತ್ತೀಚೆಗೆ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಎಮ್ಮಿ ಪುರಸ್ಕಾರಕ್ಕೆ ನಾಮನಿರ್ದೇಶನ ಕೂಡ ಮಾಡಿ, ಗೌರವಿಸಲಾಗಿದೆ.
ಗ್ಯಾಂಗ್ಸ್ ಆಫ್ ವಾಸ್ಸಿಪುರ್‌ನಲ್ಲಿ ನವಾಜುದ್ದೀನ್ ನಟನೆಗೆ ಮಾರು ಹೋಗದವರೇ ಇಲ್ಲ. ಬಾಲಿವುಡ್‌ನ ಮೂವರು ಖಾನ್‌ಗಳು ಕೂಡ ನವಾಜ್ ಎಂಬ ನಟನ ಜತೆಗೆ ಸ್ಕ್ರೀನ್ ಹಂಚಿಕೊಳ್ಳಲು ಸ್ವಲ್ಪ ಯೋಚಿಸುತ್ತಾರೆ. ಯಾಕೆಂದರೆ, ಇಡೀ ಸೀನ್ ನವಾಜ್ ಜೇಬಿಗೆ ಇಳಿದುಬಿಡುತ್ತದೆ. ಹೀರೋಗಿರಿಗೆ ಅವಕಾಶವೇ ಉಳಿಯಲ್ಲ. ಆದರೆ, ಸದ್ಯ ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ನವಾಜುದ್ದೀನ್ ಅವರು, ಒಂದು ಕಾಲದಲ್ಲಿ ಮೆಡಿಕಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರಂತೆ ! ಹೌದು, ವಾಚ್‌ಮ್ಯಾನ್ ಕೂಡ ಆಗಿದ್ದರಂತೆ. ಅವರ ಕಷ್ಟದ ದಿನಗಳನ್ನು ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಜತೆಗೆ ಹಂಚಿಕೊಂಡಿದ್ದಾರೆ.
ಅಬ್ಬಾ….! ಒಂದೇ ವಾರದಲ್ಲಿ 23 ಮಿಲಿಯನ್ ವೀಕ್ಷಣೆ ಗಳಿಸಿದೆ ಈ ವಿಡಿಯೋ…..!
ಗುಜರಾತಿನ ಬರೋಡಾದಲ್ಲಿ ಹಲವು ವರ್ಷಗಳ ಮುನ್ನ ನವಾಜುದ್ದೀನ್ ಅವರು ಜೀವನ ನಿರ್ವಹಣೆಗಾಗಿ ಮೆಡಿಕಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮುಂಬಯಿಗೆ ಸಿನಿಮಾ ಆಕರ್ಷಣೆಯಿಂದಾಗಿ ಕಾಲಿಟ್ಟಾಗ ಜೀವನ ಸಾಗಿಸಲು ರಾತ್ರಿ ಪಾಳಿಯಲ್ಲಿ ವಾಚ್‌ಮ್ಯಾನ್ ಆಗಿದ್ದರಂತೆ. ಹಣದ ಅಗತ್ಯ ಬಹಳ ಇದ್ದ ಕಾರಣ, ಯಾವುದೇ ಕೆಲಸ ಸಿಕ್ಕರೂ ಇಲ್ಲ ಎನ್ನಲಾಗುತ್ತಲೇ ಇರಲಿಲ್ಲ. ಆದರೆ ಎಲ್ಲ ಕೆಲಸಗಳೂ ಖುಷಿ ಕೊಟ್ಟಿವೆ ಎನ್ನುತ್ತಾರೆ ನವಾಜುದ್ದೀನ್.
ಅವರ ಪ್ರಕಾರ, ಸಣ್ಣದೊಂದು ಊರಿನಿಂದ ಮಹಾನಗರಗಳಿಗೆ ವಲಸೆ ಬರುವ ಜನರಿಗೆ ಅಗಾಧ ಅನುಭವ ಇರುತ್ತದೆ. ಹಾಗಾಗಿ ಯಾವುದೇ ಪಾತ್ರದಲ್ಲಿ ಅವರು ಸುಲಭವಾಗಿ ನುಸುಳಬಲ್ಲರು. ನಿತ್ಯ ಜೀವನದಲ್ಲಿ ಅನೇಕ ವ್ಯಕ್ತಿತ್ವದ ಜನರನ್ನು ಅವರು ಕಷ್ಟದ ದಿನಗಳಲ್ಲಿ ಕಂಡಿರುತ್ತಾರೆ. ಅದೇ ತಮ್ಮ ಪಾಲಿಗೆ ವರದಾನವಾಗಿದೆ. ಸಾವಿರಾರು ಜನರನ್ನು ಜೀವನದಲ್ಲಿ ಭೇಟಿ ಆಗಿದ್ದೇನೆ. ಅವರಲ್ಲಿ ಯಾರಾದರೊಬ್ಬರು ನನಗೆ ಸಿಕ್ಕ ಪಾತ್ರದಂತೆ ಕಾಣಿಸಿಬಿಡುತ್ತಾರೆ ಎಂದು ತಮ್ಮ ನಟನೆ ಕೌಶಲ್ಯದ ಗುಟ್ಟನ್ನು ನವಾಜುದ್ದೀನ್ ತೆರೆದಿಟ್ಟಿದ್ದಾರೆ.