ಚಿಕ್ಕ ಮಕ್ಕಳು ತಮ್ಮ ಮನೆಯಿಂದ ಹೊರಗೆ ಬರುವುದು ಅಥವಾ ತಮ್ಮ ಪೋಷಕರ ಹಿಡಿತದಿಂದ ತಪ್ಪಿಸಿಕೊಳ್ಳುವುದು ಸಾಮಾನ್ಯ.
ಮನೆಯಿಂದ ಪೋಷಕರ ಕಣ್ತಪ್ಪಿಸಿ ರಸ್ತೆಗೆ ಬರುವ ಮಕ್ಕಳ ರಕ್ಷಣೆಯಂತೂ ಪೋಷಕರಿಗೆ ದೊಡ್ಡ ಸಾಹಸವೇ. ಅದೇ ರೀತಿ ಪಕ್ಕದ ಮನೆಯ ಪುಟ್ಟ ಮಗು ದಿಢೀರನೇ ವಾಹನಗಳು ಸಂಚರಿಸುವ ರಸ್ತೆಗೆ ಬಂದಾಗ ಅದನ್ನು ಪಕ್ಕದ ಮನೆಯ ವ್ಯಕ್ತಿ ರಕ್ಷಿಸಿದ್ದಾರೆ.
ತಕ್ಷಣ ವ್ಯಕ್ತಿ ಮನೆಯಿಂದ ಹೊರಗೆ ಓಡಿಬಂದು ರಸ್ತೆಗೆ ಬಂದಿದ್ದ ಮಗುವನ್ನು ತ್ವರಿತಗತಿಯಲ್ಲಿ ರಕ್ಷಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದೆ. ಗುಡ್ ನ್ಯೂಸ್ ಮೂವ್‌ಮೆಂಟ್‌ನಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊ ಒಬ್ಬ ವ್ಯಕ್ತಿಯು ತನ್ನ ನೆರೆಹೊರೆಯವರ ಮಗುವನ್ನು ಉಳಿಸಲು ತನ್ನ ಮನೆಯಿಂದ ಆತುರದಿಂದ ಹೊರಬರುತ್ತಿರುವುದನ್ನು ತೋರಿಸುತ್ತದೆ.
https://youtu.be/nzEAAxSilJQ