ಸಾಮಾನ್ಯವಾಗಿ ಯಾವುದೇ ಪ್ರಾಣಿಯ ಮರಿಯಾದರೂ ಚೇಷ್ಟೆ ಮಾಡುವುದು ನಿರೀಕ್ಷಿತ ಸ್ವಭಾವವೇ ಆಗಿದೆ. ಅದರಲ್ಲೂ ಮಂಗಗಳು, ಚಿಂಪಾಜ಼ಿಗಳು ಈ ವಿಚಾರದಲ್ಲಿ ಇನ್ನೂ ಹೆಚ್ಚೇ ಎನ್ನಬಹುದು.
ಮೃಗಾಲಯದಲ್ಲಿರುವ ಮರಿ ಚಿಂಪಾಂಜ಼ಿಯೊಂದು ವೀಕ್ಷಕರತ್ತ ಕಲ್ಲು ತೂರುತ್ತಿದ್ದು, ಅದನ್ನು ತೆಪ್ಪಗಾಗಿಸಲು ವಯಸ್ಕ ಚಿಂಪಾಂಜ಼ಿಯೊಂದು ಅದನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಆಧಿಕಾರಿ ಸುಶಾಂತಾ ನಂದಾ ಶೇರ್ ಮಾಡಿದ್ದಾರೆ.
“ವೀಕ್ಷಕರತ್ತ ಕಲ್ಲೆಸೆಯುತ್ತಿರುವ ಮರಿಗೆ ತರಾಟೆ ತೆಗೆದುಕೊಳ್ಳಲಾಗಿದೆ. ಅವೂ ಸಹ ನಮ್ಮಂತೆಯೇ. ನಿಜವಾದ ಶಿಸ್ತನ್ನು ಕಲಿಸುವುದೇ ಹೆತ್ತವರು !” ಎಂದು ಸುಶಾಂತಾ ಈ ವಿಡಿಯೋಗೆ ಕ್ಯಾಪ್ಷನ್ ಕೊಟ್ಟು ಶೇರ್ ಮಾಡಿದ್ದಾರೆ.
ವೀಕ್ಷಕರತ್ತ ಕಲ್ಲೆಸೆಯುತ್ತಿದ್ದ ಮರಿಗೆ ಬುದ್ಧಿ ಹೇಳಲು ದೊಡ್ಡ ಚಿಂಪಾಂಜ಼ಿ ಕಡ್ಡಿ ತೆಗೆದುಕೊಂಡು ಏಟು ಕೊಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.