alex Certify ಬಾಲಿವುಡ್​ ಸ್ಟಾರ್​ ರಾಜ್​ಕುಮಾರ್​ ಚಿತ್ರದ ಡೈಲಾಗ್ ನಿರರ್ಗಳವಾಗಿ ನುಡಿದು ಭೇಷ್​ ಎನಿಸಿಕೊಂಡ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್​ ಸ್ಟಾರ್​ ರಾಜ್​ಕುಮಾರ್​ ಚಿತ್ರದ ಡೈಲಾಗ್ ನಿರರ್ಗಳವಾಗಿ ನುಡಿದು ಭೇಷ್​ ಎನಿಸಿಕೊಂಡ ಬಾಲಕ

ಲಖನೌ (ಉತ್ತರ ಪ್ರದೇಶ): ಹಲವು ಮಕ್ಕಳಿಗೆ ಪ್ರತಿಭೆ ಎನ್ನುವುದು ಹುಟ್ಟುತ್ತಲೇ ಬರುತ್ತವೆ, ಇನ್ನು ಕೆಲವರಿಗೆ ಅದು ಬಾಲ್ಯದಲ್ಲಿಯೇ ಮೈದಳೆಯುತ್ತದೆ. ಎಷ್ಟೋ ಅಸಾಧ್ಯ ಎನಿಸುವಂಥ ಪ್ರತಿಭೆಗಳನ್ನು ಮಾಡಿ ಮಕ್ಕಳು ಅಚ್ಚರಿಗೊಳಿಸುವುದು ಇದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ.

ಪುಟ್ಟ ಬಾಲಕನೊಬ್ಬ ಬಾಲಿವುಡ್​ನ ಹಿರಿಯ ನಟ ರಾಜ್​ಕುಮಾರ್​ ಅವರ ಸುಪ್ರಸಿದ್ಧ ಹಿಟ್​ ಚಲನಚಿತ್ರ ತಿರಂಗಾದ ಡೈಲಾಗ್​ ಒಂದನ್ನು ನಿರರ್ಗಳವಾಗಿ ಹೇಳಿ ಅಚ್ಚರಿಗೊಳಿಸಿದ್ದು, ನೆಟ್ಟಿಗರು ಈ ಪ್ರತಿಭೆಗೆ ಶಹಬ್ಬಾಸ್​ ಹೇಳುತ್ತಿದ್ದಾರೆ.

ಈ ವೈರಲ್​ ವಿಡಿಯೋದಲ್ಲಿ ನೀನು ಯಾವ ಶಾಲೆಯಲ್ಲಿ ಓದುತ್ತಿ ಎಂದು ಪ್ರಶ್ನೆ ಕೇಳಿದಾಗ ಬಾಲಕ ಉತ್ತರ ಪ್ರದೇಶದಲ್ಲಿರುವ “ಭಗವತ್ ಪ್ರಸಾದ್ ಮೆಮೋರಿಯಲ್ ಇಂಟರ್‌ಕಾಲೇಜ್, ಶ್ರೀನಾಥ್ ವಿಹಾರ್, ಬಂದಾ” ಎಂದು ಉತ್ತರಿಸುತ್ತಾನೆ. ಹೆಸರೇನು ಎಂದು ಕೇಳಿದಾಗ “ನನ್ನ ಹೆಸರು ವಿವೇಕ್ ಕುಮಾರ್” ಎಂದು ಉತ್ತರಿಸುತ್ತಾನೆ.

ಸಿನಿಮಾ ಒಂದರ ಡೈಲಾಗ್​ ಹೇಳು ಎಂದಾಗ ಬಾಲಕ ರಾಜ್​ಕುಮಾರ್​ “ನಾ ಗೋಲಿ ಸೇ, ನಾ ತಲ್ವಾರ್ ಸೆ, ಬಂದಾ ದರ್ತಾ ಹೈ ತೋ ಬಾಪು ಕಿ ಮಾರ್ ಸೇ. (ಗುಂಡು ಅಥವಾ ಕತ್ತಿಯಲ್ಲ, ನನ್ನ ತಂದೆಯ ಹೊಡೆತಕ್ಕೆ ನಾನು ಹೆದರುತ್ತೇನೆ).” ಎಂದು ಹೇಳುತ್ತಾರೆ. ಇದರ ವಿಡಿಯೋ ವೈರಲ್​ ಆಗಿದ್ದು, ಬಾಲಕನ ಟ್ಯಾಲೆಂಟ್​ಗೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...