
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಸರ್ಕಾರದಿಂದ ಅನರ್ಹರ ಪಟ್ಟಿ ಬಿಡುಗಡೆ – ನಿಮ್ಮ ಹೆಸರೂ ಇದರಲ್ಲಿದೆಯಾ ಎಂಬುದನ್ನು ಪರಿಶೀಲಿಸಲು ಇಲ್ಲಿದೆ ಮಾಹಿತಿ
ಐಸಿಸಿ ವರ್ಲ್ಡ್ ಕಪ್ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ ಭಾನುವಾರ ರಾತ್ರಿ ದುಬೈನಿಂದ ಮರಳಿದ್ದರು. ಮೂಲಗಳ ಪ್ರಕಾರ ಈ ವಾಚ್ಗಳನ್ನು ಮೊದಲೇ ಖರೀದಿ ಮಾಡಲಾಗಿತ್ತು. ಆದರೆ ಸೀರಿಯಲ್ ಸಂಖ್ಯೆಗಳು ಹೊಂದಾಣಿಕೆ ಆಗಿರಲಿಲ್ಲ. ಹೊಸ ವಾಚುಗಳು 5 ಕೋಟಿ ರೂಪಾಯಿ ಮೌಲ್ಯದ್ದು ಎಂದು ಹೇಳಲಾಗಿತ್ತು.
ಆದರೆ ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿರುವ ಪಾಂಡ್ಯ ತಮ್ಮ ಬಳಿ ಇದ್ದ ವಾಚ್ ತಲಾ 1.8 ಕೋಟಿ ರೂಪಾಯಿ ಹಾಗೂ 1.4 ಕೋಟಿ ರೂಪಾಯಿ ಮೌಲ್ಯದ್ದಾಗಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪೂಜಾ ಕೋಣೆಯಲ್ಲಿ ಇವುಗಳಿದ್ದರೆ ʼಆರ್ಥಿಕʼ ಸಮೃದ್ಧಿ ನಿಶ್ಚಿತ
ಮೂಲಗಳ ಪ್ರಕಾರ ವಾಚ್ನ ನಿಜವಾದ ಮೊತ್ತ ಹಾಗೂ ಸರಣಿ ಸಂಖ್ಯೆಗಳನ್ನು ಹೊಂದಾಣಿಕೆಯಾಗುವಂತಹ ಬಿಲ್ನ್ನು ಮತ್ತೊಮ್ಮೆ ಸಲ್ಲಿಸಬೇಕಿದೆ. ಅಲ್ಲದೇ ಈ ವಾಚ್ಗಳಿಗೆ 38 ಪ್ರತಿಶತ ಸುಂಕವನ್ನೂ ತೆರಬೇಕು. ಈ ಎಲ್ಲಾ ದಾಖಲೆಗಳನ್ನು ನೀಡಲು ಪಾಂಡ್ಯ ಯಶಸ್ವಿಯಾದಲ್ಲಿ ಮಾತ್ರ ಈ ದುಬಾರಿ ವಾಚ್ಗಳು ಅವರ ಕೈ ಸೇರಲಿದೆ. ಇಲ್ಲವಾದಲ್ಲಿ ಅದನ್ನು ವಶಪಡಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಆದರೆ ಈ ಎಲ್ಲದರ ನಡುವೆ ಪಾಂಡ್ಯ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು ತಮ್ಮ ವಾಚ್ನ ಬೆಲೆ 5 ಕೋಟಿ ರೂಪಾಯಿ ಅಲ್ಲ. ಬದಲಾಗಿ 1.5 ಕೋಟಿ ರೂಪಾಯಿ ಎಂದು ಹೇಳಿದ್ದಾರೆ. ನಾನು ಕಾನೂನಿನ ಎಲ್ಲಾ ಕ್ರಮಗಳನ್ನು ಪಾಲಿಸಿಯೇ ದುಬೈನಲ್ಲಿ ಈ ವಾಚುಗಳನ್ನು ಖರೀದಿಸಿದ್ದೇನೆ. ಅಲ್ಲದೇ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಸುಂಕ ಪಾವತಿಗೆ ನಾನಾಗಿಯೇ ತಯಾರಾಗಿದ್ದೆ ಎಂದೂ ಸ್ಪಷ್ಟನೆ ನೀಡಿದ್ದಾರೆ.