ಮಣಿಪುರದ ಇಂಫಾಲದಲ್ಲಿ, ಸೇತುವೆ ನಿರ್ಮಾಣಕ್ಕೆಂದು ಜಗತ್ತಿನ ಅತ್ಯಂತ ಎತ್ತರದ ಕಂಬವೊಂದನ್ನು ಭಾರತೀಯ ರೈಲ್ವೇ ನಿರ್ಮಾಣ ಮಾಡಿದೆ. ಈ ಸೇತುವೆ ಇಜಾಯಿ ನದಿಗೆ ಅಡ್ಡಲಾಗಿ ಮೇಲೇಳಲಿದೆ.
ದೇಶದ ಈಶಾನ್ಯ ಭಾಗವನ್ನು ಪ್ರಧಾನ ಭೂಮಿಯೊಂದಿಗೆ ಸಂಪರ್ಕಿಸಲು ಬ್ರಾಡ್ಗೇಜ್ ರೈಲ್ವೇ ಸಂಪರ್ಕ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಈ ಸೇತುವೆ ಮಹತ್ವದ್ದಾಗಿದ್ದು, ಡಿಸೆಂಬರ್ 2023ರ ವೇಳೆಗೆ 141 ಮೀಟರ್ ಎತ್ತರದ ಸೇತುವೆಯ ಕಾಮಗಾರಿ ಕೆಲಸ ಮುಗಿಯಬೇಕಿದೆ.
ಸೇತುವೆಯ ಉದ್ದ 703 ಮೀಟರ್ ಇರಲಿದ್ದು, ಹೈಡ್ರಾಲಿಕ್ ಆಗರ್ಗಳನ್ನು ಬಳಸಿ ಸೇತುವೆಯ ಕಂಬಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ವಿಶೇಷವಾದ ಉಕ್ಕಿನ ಗ್ರೈಡರ್ಗಳನ್ನು ಒಂದೊಂದಾಗಿ ಸಾಗಾಟ ಮಾಡುತ್ತಾ, ಅವುಗಳನ್ನು ನಿರ್ಮಾಣ ಸ್ಥಳದಲ್ಲಿ ಕ್ಯಾಂಟಿಲಿವರ್ ನೆರವಿನೊಂದಿಗೆ ಮೇಲೆತ್ತಿ ಕೂರಿಸಲಾಗುತ್ತಿದೆ.
ನಿಮ್ಮನ್ನು ಲಕ್ಷಾಧೀಶರನ್ನಾಗಿಸುತ್ತೆ 25 ಪೈಸೆಯ ಈ ನಾಣ್ಯ
ನಿರ್ಮಾಣ ಕಾರ್ಮಿಕರು ಹಾಗೂ ಸಾಮಗ್ರಿಗಳನ್ನು ಸುರಕ್ಷಿತವಾಗಿ ಹಾಗೂ ವೇಗವಾಗಿ ಎತ್ತರಕ್ಕೆ ಕಳುಹಿಸಲು ಸ್ವಯಂ ಚಾಲಿತ ಎಲೆಕ್ಟ್ರಿಕ್ ಲಿಫ್ಟ್ಗಳ ಬಳಕೆ ಮಾಡಲಾಗುತ್ತಿದೆ. ಈ ಯೋಜನೆಯಲ್ಲಿ ಒಟ್ಟು 45 ಸುರಂಗಗಳು ಇವೆ.
ಯೋಜನೆಯ ಮುಕ್ತಾಯವಾದಲ್ಲಿ 111ಕಿಮೀ ದೂರವನ್ನು 2.5 ಗಂಟೆಗಳ ಒಳಗೆ ಕ್ರಮಿಸಬಹುದಾಗಿದೆ ಎಂದು ಪ್ರಾಜೆಕ್ಟ್ನ ಮುಖ್ಯ ಇಂಜಿನಿಯರ್ ಸಂದೀಪ್ ಶರ್ಮಾ ತಿಳಿಸಿದ್ದಾರೆ.
ಯೂರೋಪ್ನ ಮೊಂಟೆನೆಗ್ರೋದ ಮಲಾ-ರಿಜೆಕಾ ಸೇತುವೆಯ ಕಂಬವು 139 ಮೀಟರ್ ಎತ್ತರವಿದ್ದು, ಈವರೆಗಿನ ದಾಖಲೆ ಹೊಂದಿತ್ತು.