
ವಿಶ್ವದ ಅತಿ ಎತ್ತರದ ವ್ಯಕ್ತಿ, ಸುಲ್ತಾನ್ ಕೋಸೆನ್ (ಟರ್ಕಿ), ಡಿಸೆಂಬರ್ 10 ರಂದು 40 ವರ್ಷಗಳನ್ನು ಪೂರೈಸಿದರು. ರಿಪ್ಲೀಸ್ ಬಿಲೀವ್ ಇಟ್ ಆರ್ ನಾಟ್ ಗೆ ಭೇಟಿ ನೀಡುವ ಮೂಲಕ ಹುಟ್ಟುಹಬ್ಬವನ್ನು ಅವರು ಆಚರಿಸಿಕೊಂಡರು.
251-ಸೆಂ (8-ಅಡಿ-2.8-ಇಂಚು) ಎತ್ತರದ ಸುಲ್ತಾನ್, ರಾಬರ್ಟ್ ವಾಡ್ಲೋ ಅವರ ಪ್ರತಿಮೆಯ ಪಕ್ಕದಲ್ಲಿ ಪೋಸ್ ನೀಡಿದರು. ನಾನು ಇಲ್ಲಿಯವರೆಗೆ ಭೇಟಿ ನೀಡದ ಉಳಿದ ದೇಶಗಳಿಗೆ ಪ್ರಯಾಣಿಸಬೇಕು ಎಂದು ತನ್ನ ಆಸೆಯನ್ನು ಈ ಸಂದರ್ಭದಲ್ಲಿ ಆತ ಹೇಳಿಕೊಂಡಿದ್ದಾನೆ.
ಸುಲ್ತಾನ್ ಈಗ ಟರ್ಕಿಯ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ. ಕಳೆದ ವರ್ಷ ತನಗೊಬ್ಬ ಹೆಂಡತಿ ಬೇಕು ಎಂದು ಹೇಳುವ ಮೂಲಕ ಸುಲ್ತಾನ್ ಸುದ್ದಿಯಾಗಿದ್ದರು. ವಿಶ್ವ ಪರ್ಯಟನೆ ಮಾಡುತ್ತೇನೆ, ಅಲ್ಲಿ ಯಾರಾದರೂ ನನಗೆ ಸೂಕ್ತವಾದವರು ಸಿಗಬಹುದು ಎಂದು ತಮಾಷೆ ಮಾಡಿದ್ದು ವೈರಲ್ ಆಗಿತ್ತು.