
ಮುಂಬೈನ ಸ್ಥಳೀಯ ರೈಲ್ವೇ ನಿಲ್ದಾಣವೊಂದರಲ್ಲಿ ರೈಲು ಹತ್ತುತ್ತಿದ್ದ 50 ವರ್ಷದ ಮಹಿಳೆಯನ್ನು ಗುರುವಾರ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್) ಕಾನ್ಸ್ಟೇಬಲ್ ರಕ್ಷಿಸಿದ್ದಾರೆ. ರೈಲು ಮತ್ತು ಪ್ಲಾಟ್ ಫಾರ್ಮ್ ಅಂತರದ ನಡುವೆ ಮಹಿಳೆ ಸಿಕ್ಕಿಹಾಕಿಕೊಂಡಿದ್ದಾರೆ. ಕೂಡಲೇ ಅಲ್ಲಿದ್ದ ಮಹಿಳಾ ಕಾನ್ಸ್ಟೇಬಲ್ ಮಹಿಳೆಯನ್ನು ಹಿಡಿದು ಸುರಕ್ಷಿತವಾಗಿ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಬೈನ ಸ್ಯಾಂಡ್ ಹರ್ಸ್ಟ್ ರಸ್ತೆ ರೈಲ್ವೇ ನಿಲ್ದಾಣದಲ್ಲಿ ನಡೆದ ಈ ಘಟನೆಯು ನಿಲ್ದಾಣದಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಕಾಣುವಂತೆ ಮಹಿಳೆ ರೈಲು ಹತ್ತಲು ಪ್ಲಾಟ್ ಫಾರ್ಮ್ ನತ್ತ ಬರುತ್ತಾಳೆ. ಈ ವೇಳೆ ರೈಲು ಚಲಿಸಿದೆ. ಸಮತೋಲನ ಕಳೆದುಕೊಂಡ ಆಕೆ ಜಾರಿಬಿದ್ದಿದ್ದಾಳೆ. ಹತ್ತಿರದಲ್ಲೇ ನಿಂತಿದ್ದ ಮಹಿಳಾ ಪೇದೆ ಕೂಡಲೇ ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೇದೆಯನ್ನು ಸಪ್ನಾ ಗೋಲ್ಕರ್ ಎಂದು ಗುರುತಿಸಲಾಗಿದೆ. ಗೋಲ್ಕರ್ ಅವರ ಮಿಂಚಿನ ವೇಗದ ರಕ್ಷಣೆಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.