ಶಿಕ್ಷಣಕ್ಕಾಗಿ ಮನೆಯಿಂದ ದೂರದ ಊರಿನಲ್ಲಿ ಓದಲೋ ಅಥವಾ ಉದ್ಯೋಗದ ನಿಮಿತ್ತ ಬೇರೆ ಊರು, ದೇಶಕ್ಕೆ ತೆರಳಿದವರು ಅನೇಕರಿದ್ದಾರೆ. ಎಷ್ಟೋ ಸಮಯದ ಬಳಿಕ ತಮ್ಮ ಮನೆಗೆ ವಾಪಸ್ ಆದಾಗ ಆ ಸಂತೋಷಕ್ಕೆ ಪಾರವೇ ಇರೋದಿಲ್ಲ. ಇದೀಗ ಸುಮಾರು ಎರಡು ವರ್ಷ ಏಳು ತಿಂಗಳ ನಂತರ ತನ್ನ ಕುಟುಂಬವನ್ನು ಸೇರಿದ ಯುವತಿಯೊಬ್ಬಳ ವಿಡಿಯೋ ಭಾರಿ ವೈರಲ್ ಆಗಿದೆ.
ಗುಡ್ ನ್ಯೂಸ್ ಎಂಬ ಇನ್ಸ್ಟಾಗ್ರಾಂ ಪೇಜ್ ಈ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದೆ. ರೆಸ್ಟೋರೆಂಟ್ ನಲ್ಲಿ ತನ್ನ ಕುಟುಂಬ ಊಟಕ್ಕೆ ಕುಳಿತಿದ್ದರೆ, ಸರ್ಫ್ರೈಸ್ ನೀಡುವುದಕ್ಕಾಗಿ ಪರಿಚಾರಕಿಯಂತೆ ಬಂದ ಯುವತಿ ಆರ್ಡರ್ ತೆಗೆದುಕೊಳ್ಳುತ್ತಾಳೆ. ಕೂಡಲೇ ಅವಳನ್ನು ಪೋಷಕರು ಗುರುತಿಸಿದ್ದು, ಸಂತೋಷದಲ್ಲಿ ಕಣ್ಣೀರ ಕೋಡಿಯೇ ಹರಿದಿದೆ. ತಮ್ಮ ಮಗಳನ್ನು ಪೋಷಕರು ಅಪ್ಪಿ ಮುದ್ದಾಡಿದ್ದಾರೆ. ವಿಡಿಯೋದಲ್ಲಿ ನಂತರ ಯುವತಿ ಸಿಮೋನಾ ತನ್ನ ಅಜ್ಜಿ ಮತ್ತು ಕುಟುಂಬದ ಮತ್ತೊಬ್ಬರು ಸದಸ್ಯರೊಂದಿಗಿನ ಪುನರ್ಮಿಲನವನ್ನು ತೋರಿಸುತ್ತದೆ.
ಮೆಡಿಕಲ್, ಡೆಂಟಲ್, ಆಯುಷ್ ಕೋರ್ಸ್ ಸೇರಬಯಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ: ಡಿ. 13 ರಿಂದ ಆನ್ಲೈನ್ ಮೂಲಕ ಅರ್ಜಿ
ರಾತ್ರಿ ರೆಸ್ಟೋರೆಂಟ್ ನಲ್ಲಿ ಊಟಕ್ಕೆ ಕುಳಿತಿದ್ದ ತನ್ನ ಕುಟುಂಬವನ್ನು ಅಚ್ಚರಿಗೊಳಿಸಲು ಸಿಮೋನಾ ಪರಿಚಾರಿಕೆಯಾಗಿ ಎಂಟ್ರಿ ನೀಡಿದ್ದಾಳೆ. 2 ವರ್ಷ ಮತ್ತು 7 ತಿಂಗಳ ನಂತರ, ಇಟಲಿಯ ಮನೆಗೆ ಮರಳಿರುವುದಾಗಿ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದ್ದು, 1 ಲಕ್ಷಕ್ಕೂ ಹೆಚ್ಚು ಲೈಕ್ಗಳ ಜೊತೆಗೆ 16 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ನೆಟ್ಟಿಗರನ್ನು ಭಾವನಾತ್ಮಕಗೊಳಿಸಿದೆ.
https://youtu.be/XwhHFvJ90Rg