
ತನ್ನ ಪ್ರಾಣವನ್ನು ಪಣಕ್ಕಿಟ್ಟ ಮಹಿಳೆಯೊಬ್ಬಳು ಅಂಬೆಗಾಲಿಡುವ ಮಗುವಿನ ಜೀವವನ್ನು ಉಳಿಸಿರುವ ಘಟನೆ ಚೀನಾದಲ್ಲಿ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ಚೀನಾದ ಹುನಾನ್ ಪ್ರಾಂತ್ಯದ ರಾಜಧಾನಿ ಮತ್ತು ದೊಡ್ಡ ನಗರವಾಗಿರುವ ಚಾಂಗ್‌ಶಾದಲ್ಲಿ ಈ ಘಟನೆ ನಡೆದಿದ್ದು, ಸಿಸಿ ಟಿವಿ ಕ್ಯಾಮೆರಾಗಳು ಇದನ್ನು ಸೆರೆಹಿಡಿದಿವೆ. ಮಹಿಳೆಯನ್ನು ಹೀರೋ ಎಂದು ಪ್ರಶಂಸಿಸಲಾಗುತ್ತಿದೆ.
ಸಿಸಿ ಟಿವಿ ಫುಟೇಜ್‌ನಲ್ಲಿ ಮಹಿಳೆಯ ಸಂಬಂಧಿಯ ಮಗು ಬಹುತೇಕ ಗಟ್ಟಿಯಾದ ಕಾಂಕ್ರೀಟ್‌ನ ಮೇಲೆ ಬೀಳುವಷ್ಟರಲ್ಲಿ, ಅಲ್ಲಿಯೇ ಇದ್ದ ಮಹಿಳೆ ಜಿಗಿದು ಅದನ್ನು ರಕ್ಷಣೆ ಮಾಡಿದ್ದಾಳೆ.
ಅವಳು ತಕ್ಷಣ ಓಡಿ ತನ್ನ ತೋಳುಗಳನ್ನು ಚಾಚುತ್ತಾ ಮಗುವಿನತ್ತ ಧುಮುಕಿ ಸಿನಿಮೀಯ ರೀತಿಯಲ್ಲಿ ಅದನ್ನು ಕಾಪಾಡಿದ್ದಾಳೆ. ನಂತರ ಮಹಿಳೆ ಮಗುವನ್ನು ತನ್ನ ತೋಳುಗಳಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾಳೆ. ಮಗುವಿಗೆ ಯಾವುದೇ ಹಾನಿಯಾಗಲಿಲ್ಲ.
ಕಳೆದ ವರ್ಷ ವೈರಲ್ ಆಗಿದ್ದ ಇದೇ ರೀತಿಯ ವೀಡಿಯೊದಲ್ಲಿ, ಚೀನಾದ ವ್ಯಕ್ತಿಯೊಬ್ಬ ತನ್ನ ಐದನೇ ಮಹಡಿಯ ಫ್ಲಾಟ್‌ನ ಕಿಟಕಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಬಾಲಕಿಯನ್ನು ರಕ್ಷಿಸಿದ್ದ.