ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಪ್ರತಿಭೆಯ ಪ್ರದರ್ಶನಕ್ಕೆ ಈಗ ವೇದಿಕೆಗಾಗಿ ಕಾದು ಕೂರಬೇಕಿಲ್ಲ. ಯಾರ ಸಹಾಯವೂ ಇಲ್ಲದೆ ತಮ್ಮಲ್ಲಿ ಅಡಗಿರುವ ವಿಶಿಷ್ಟ ಪ್ರತಿಭೆಯನ್ನು ಸಮಾಜದ ಮುಂದಿಡಲು ಈಗ ಸಾಮಾಜಿಕ ಜಾಲತಾಣ ಒಂದು ಅತ್ಯುತ್ತಮ ವೇದಿಕೆ.
ಇಲ್ಲೊಬ್ಬ ಯುವತಿ ಜಗ್ಲಿಂಗ್ ಮಾಡುವ ವೀಡಿಯೋ ಇತ್ತೀಚೆಗೆ ಭಾರಿ ವೈರಲ್ ಆಗಿದೆ. ಸಾಮಾನ್ಯವಾಗಿ ನಿಂತು, ಕೈಗಳನ್ನು ಬಳಸಿ ಜಗ್ಲಿಂಗ್ ಮಾಡುವುದನ್ನು ನಾವು ನೋಡಿಯೇ ಇರುತ್ತೇವೆ. ಆದರೆ ಇದು ಅಂತಿಂಥ ಸಾಹಸವಲ್ಲ. ಕುರ್ಚಿಯ ಮೇಲೆ ತಲೆ ಕೆಳಕಾಗಿ ಮಲಗಿ ಕೇವಲ ತನ್ನ ಪಾದದಿಂದಲೇ 5 ಚೆಂಡುಗಳನ್ನು ಬ್ಯಾಲೆನ್ಸ್ ಮಾಡುತ್ತಾ, ಲೀಲಾಜಾಲವಾಗಿ ಜಗ್ಲಿಂಗ್ ಮಾಡುವ ದೃಶ್ಯ ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಕೆಲವೇ ಘಂಟೆಗಳ ಕೆಳಗೆ ಅಪ್ಲೋಡ್ ಆದ ವಿಡಿಯೋದಲ್ಲಿ ಯುವತಿ ತಲೆ ಕೆಳಕಾಗಿ ಮಲಗಿ, ಸಲೀಸಾಗಿ, ಅತ್ಯಂತ ಆತ್ಮವಿಶ್ವಾಸದಿಂದ ಜಗ್ಲಿಂಗ್ ಮಾಡುತ್ತಾ ನಂತರ 5 ಚೆಂಡುಗಳನ್ನು ಮೊದಲಿನಂತೆ ಸ್ಟ್ಯಾಂಡ್ ಮೇಲೆ ಜೋಡಿಸಿ ನಿಧಾನವಾಗಿ ಎದ್ದು ನಿಲ್ಲುತ್ತಾಳೆ. ಈಗ ಈ ವೀಡಿಯೋ ಲಕ್ಷಾಂತರ ಜನರ ವೀಕ್ಷಣೆಗೆ ಒಳಪಟ್ಟಿದೆ.