
ಪ್ರಾಣಿ ಮತ್ತು ಮನುಷ್ಯರ ಸಂಬಂಧ ಕುತೂಹಲಕಾರಿಯಾದದ್ದು. ಪ್ರಾಣಿಗಳು ಸಾಕುಪ್ರಾಣಿಗಳೇ ಆಗಿರಬೇಕೆಂದೇನು ಇಲ್ಲ, ವನ್ಯಜೀವಿಗಳೂ ತಮ್ಮ ಮಾಲೀಕರ ಮೇಲೆ ಅಷ್ಟೇ ಪ್ರೀತಿ, ಸಲುಗೆ ಹೊಂದಿರುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹುಲಿ ಎಂದರೆ ಸಾಕು ಕನಸಿನಲ್ಲಿಯೂ ಬೆಚ್ಚಿಬೀಳುವವರೇ ಎಲ್ಲರು. ಆದರೆ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಹುಲಿ ಮರಿಗಳಿಗೆ ಚುಂಬಿಸುತ್ತ ಅದರ ಜತೆ ಆಟವಾಡುತ್ತಿರುವ ದೃಶ್ಯವಿದೆ. ಮಹಿಳೆ ಈ ಹುಲಿಗಳು ತನ್ನ ಮಕ್ಕಳೋ ಎಂಬಂತೆ ಮುತ್ತುಕೊಡುತ್ತಾ ಅದಕ್ಕೆ ಪ್ರೀತಿ ಮಾಡುತ್ತಿದ್ದಾಳೆ. ನಾಯಿ, ಬೆಕ್ಕುಗಳಿಗೆ ಮಾಲೀಕರು ಪ್ರೀತಿಸುವಂತೆಯೇ ಈಕೆ ಹುಲಿಗಳನ್ನು ಮುದ್ದಾಡುತ್ತಿದ್ದಾಳೆ.
@tiger-tiger678 ಹೆಸರಿನ ಬಳಕೆದಾರರು ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು ಇದಾಗಲೇ 10 ಸಾವಿರಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಿ, ಥರೇವಾರಿ ಕಮೆಂಟ್ ಮಾಡಿದ್ದಾರೆ. ಪ್ರಾಣಿಗಳು ಮನುಷ್ಯರಂತೆ ಕ್ರೂರಿಗಳಲ್ಲ. ಅವುಗಳಿಗೆ ಪ್ರೀತಿ ಮಾಡಿದರೆ, ಅವು ಕೂಡ ಪ್ರೀತಿಯೇ ತೋರುತ್ತವೆ. ತಮಗೆ ಹಿಂಸೆ ಮಾಡಿದರೆ ಮಾತ್ರ ಅವು ಕ್ರೂರಿಯಾಗುತ್ತವೆ ಎನ್ನುವುದಕ್ಕೆ ಈ ವಿಡಿಯೋ ಉದಾಹರಣೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.