
ವಧುವಿನ ಅಲಂಕಾರಗಳ ಅನೇಕ ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗುತ್ತವೆ. ಅವುಗಳ ಪೈಕಿ ಕೆಲವೊಂದು ವಿಶೇಷ ಗಮನ ಸೆಳೆಯುತ್ತದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ.
ದೆಹಲಿಯ ವೃತ್ತಿಪರ ಮೇಕಪ್ ಕಲಾವಿದ ಗಗನ್ ನೋನಿ ಅವರು ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಯುವತಿಯೊಬ್ಬರು ಲೆಹೆಂಗಾದಲ್ಲಿ ಭಾರೀ ಆಭರಣಗಳನ್ನು ಧರಿಸಿರುವುದನ್ನು ಮತ್ತು ಸಾಕಷ್ಟು ಮೇಕ್ಅಪ್ ಹೊಂದಿರುವುದನ್ನು ನೋಡಬಹುದು.
ಇವೆಲ್ಲವೂ ಸಾಮಾನ್ಯವೇ. ಆದರೆ ಗಮನ ಸೆಳೆದಿರುವುದು ಈಕೆ ಧರಿಸಿರುವ ವಿಚಿತ್ರ ಆಭರಣಗಳು. ವಧು ಧರಿಸಿರುವ ಆಭರಣದ ಗಾತ್ರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಭಾರವಾದ ನೆಕ್ಲೇಸ್ಗಳು ವಧುವಿನ ಗಾತ್ರದಷ್ಟೇ ಇದೆ.
ಒಂದು ಅವಳ ಕುತ್ತಿಗೆಯಿಂದ ಅವಳ ಎದೆಯವರೆಗೆ ವಿಸ್ತರಿಸಿದರೆ, ಇನ್ನೊಂದು ಅದರ ಕೆಳಗೆ ನೇತಾಡುತ್ತಿತ್ತು.
ಇನ್ನೊಂದು ಸರ ದೊಡ್ಡ ಊಟದ ತಟ್ಟೆಯಂತೆ ಕಾಣುತ್ತದೆ. ಇದನ್ನು ನೋಡಿ ನೆಟ್ಟಿಗರು ಅಬ್ಬಬ್ಬಾ ಎಂದು ಹುಬ್ಬೇರಿಸುತ್ತಿದ್ದಾರೆ.
https://youtu.be/vPSjgHXuuwM