ಕಳೆದ ಜೂನ್‌ನಲ್ಲಿ ನಡೆದ ಯೂನಿಯನ್ ಆಫ್ ಯುರೋಪಿಯನ್ ಫುಟ್‌ಬಾಲ್ ಅಸೋಸಿಯೇಷನ್ಸ್ (ಯುಇಎಫ್‌ಎ) ನೇಷನ್ಸ್ ಲೀಗ್‌ನಲ್ಲಿ ನಡೆದ ತಮಾಷೆಯ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ಮ್ಯೂನಿಚ್‌ನ ಅಲಿಯಾನ್ಸ್ ಅರೆನಾದಲ್ಲಿ ಜರ್ಮನಿ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯವೊಂದರಲ್ಲಿ, ಒಬ್ಬ ಫುಟ್‌ಬಾಲ್ ಅಭಿಮಾನಿ ಆಕಸ್ಮಿಕವಾಗಿ ಫುಟ್‌ಬಾಲ್ ಪಿಚ್‌ಗೆ ಕಾಗದದ ವಿಮಾನವನ್ನು ಹಾರಿಸಿರುವ ಘಟನೆ ಇದಾಗಿದೆ. ಫಿಫಾ ವಿಶ್ವಕಪ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದಿನ ವಿಡಿಯೋ ಪುನಃ ವೈರಲ್ ಆಗಿದೆ.
ಆಕಸ್ಮಿಕವಾಗಿ ಫುಟ್‌ಬಾಲ್ ಪಿಚ್‌ಗೆ ಕಾಗದದ ವಿಮಾನವನ್ನು ಹಾರಿಸಿದಾಗ ಅದು ಗುರಿಯನ್ನು ಮುಟ್ಟಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇದರ ವಿಡಿಯೋ ಅನ್ನು ಟ್ವಿಟರ್ ಬಳಕೆದಾರ ಶಾಹಿದ್ ಫರಿದಿ ಹಂಚಿಕೊಂಡಿದ್ದಾರೆ.
42 ಸೆಕೆಂಡುಗಳ ವೈರಲ್ ವಿಡಿಯೋದಲ್ಲಿ ಯುವ ಫುಟ್‌ಬಾಲ್ ಅಭಿಮಾನಿಯೊಬ್ಬ ಅರೆನಾದಲ್ಲಿ ಕಾಗದದ ವಿಮಾನವನ್ನು ತಯಾರಿಸುವುದನ್ನು ನೋಡಬಹುದು. ಆತ ತನ್ನ ಕಾಗದದ ವಿಮಾನವನ್ನು ಉಡಾವಣೆ ಮಾಡಿದ ತಕ್ಷಣ, ಪೇಪರ್‌ಕ್ರಾಫ್ಟ್ ಅಸಾಮಾನ್ಯ ವೇಗದಲ್ಲಿ ಟೇಕ್ ಆಫ್ ಆಗುವಂತೆ ಆ ವಿಮಾನ ಕಾಣಿಸುತ್ತದೆ, ನಂತರ ಗಾಳಿಯಲ್ಲಿ ವೇಗವಾಗಿ ಹೋಗುತ್ತದೆ, ನಂತರ ಈ ವಿಮಾನ ಆಟಗಾರರ ಕಡೆಗೆ ಜಾರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಆಟಗಾರರು ಕೂಡ ಒಂದು ಸಲ ಈ ವಿಮಾನ ಕಂಡು ಆತಂಕ ಹಾಗೂ ಅಚ್ಚರಿಗೆ ಒಳಗಾಗಿದ್ದರು ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ.