alex Certify ಶಾಕಿಂಗ್​: ಚಡ್ಡಿ ಧರಿಸಿದ್ದಾನೆ ಎಂಬ ಕಾರಣಕ್ಕೆ ಕೊರೊನಾ ಲಸಿಕೆಯಿಂದ ವಂಚಿತನಾದ ಯುವಕ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಚಡ್ಡಿ ಧರಿಸಿದ್ದಾನೆ ಎಂಬ ಕಾರಣಕ್ಕೆ ಕೊರೊನಾ ಲಸಿಕೆಯಿಂದ ವಂಚಿತನಾದ ಯುವಕ…..!

ಕೋವಿಡ್​ 19 ಲಸಿಕೆಯನ್ನು ಪಡೆಯಬೇಕು ಎಂದು ಲಸಿಕಾ ಕೇಂದ್ರಕ್ಕೆ ಹೋಗಿದ್ದ ಯುವಕನೊಬ್ಬ ತಾನು ಧರಿಸಿದ್ದ ಬಟ್ಟೆಯ ಕಾರಣಕ್ಕೆ ಲಸಿಕೆಯಿಂದ ವಂಚಿತನಾಗಿದ್ದಾನೆ. ಹೌದು..! ಈತ ಲಸಿಕಾ ಕೇಂದ್ರಕ್ಕೆ ಚಡ್ಡಿ ಧರಿಸಿ ಹೋಗಿದ್ದ ಎಂಬ ಕಾರಣಕ್ಕೆ ಅಧಿಕಾರಿಗಳು ಲಸಿಕೆ ನೀಡಲು ನಿರಾಕರಿಸಿದ್ದಾರೆ. ಪಶ್ಚಿಮ ಬಂಗಾಳದ ಬೋರಲ್​ ಎಂಬಲ್ಲಿ ಈ ಘಟನೆ ಸಂಭವಿಸಿದೆ.

ಶ್ರೀಶ ನಾಥ್​ ಪಂಡಿತ್​ ಹಾಗೂ ಅವರ ತಾಯಿ ರುಣು ಬೋರಲ್​ನಲ್ಲಿರುವ ಕೊರೊನಾ ಲಸಿಕಾ ಕೇಂದ್ರಕ್ಕೆ ಕೋವ್ಯಾಕ್ಸಿನ್​ ಲಸಿಕೆ ಪಡೆಯಲು ತೆರಳಿದ್ದರು. ಶ್ರೀಶ ಬಣ್ಣ ಬಣ್ಣದ ಟೀ ಶರ್ಟ್​ ಹಾಗೂ ಚಡ್ಡಿ ಧರಿಸಿದ್ದರು. ತಾಯಿಯ ಜೊತೆ ಲಸಿಕಾ ಕೇಂದ್ರಕ್ಕೆ ಶ್ರೀಶ ತೆರಳಿದ ವೇಳೆ ಮುನ್ಸಿಪಾಲ್​ ಸಿಬ್ಬಂದಿ ಈ ಧಿರಿಸಿನಲ್ಲಿ ಒಳಗೆ ಬಾರದಂತೆ ತಾಕೀತು ಮಾಡಿದ್ದಾರೆ.

ಈ ವೇಳೆ ಶ್ರೀಶ ಮುನ್ಸಿಪಾಲ್​ ಸಿಬ್ಬಂದಿಯ ಬಳಿ ಲಸಿಕಾ ಕೇಂದ್ರಕ್ಕೆ ಇದೇ ಬಟ್ಟೆಯನ್ನು ಧರಿಸಿ ಬರಬೇಕು ಎಂದು ಸರ್ಕಾರ ಯಾವುದೇ ಡ್ರೆಸ್​ ಕೋಡ್​ ನಿಗದಿ ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ ಶ್ರೀಶ ಎಷ್ಟು ಮನವಿ ಮಾಡಿದರೂ ಸಹ ಲಸಿಕೆ ನೀಡಲು ನಿರಾಕರಿಸಲಾಗಿದೆ. ಶ್ರೀಶ ತಾಯಿ ಲಸಿಕೆಯ ಮೊದಲ ಡೋಸ್​ ಸ್ವೀಕರಿಸಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಶ್ರೀಶ, ಈ ಘಟನೆಯಿಂದ ನಾನು ಆಶ್ಚರ್ಯಚಕಿತನಾಗಿದ್ದೇನೆ. ಚಡ್ಡಿ ಧರಿಸಿದ ಕಾರಣಕ್ಕೆ ಕೋವಿಡ್​ 19 ಲಸಿಕೆ ನೀಡಲು ನಿರಾಕರಿಸಿದ್ದು ಬಹುಶಃ ಇದೇ ಮೊದಲು ಇರಬೇಕು. ಲಸಿಕಾ ಕೇಂದ್ರದಿಂದ ತೆರಳುವಂತೆ ನನಗೆ ಗದರಿದ್ದರಿಂದ ನಾನು ಮುಜುಗರಕ್ಕೆ ಒಳಗಾಗಿದ್ದೇನೆ ಎಂದು ಹೇಳಿದ್ದಾರೆ.

ಈ ಘಟನೆಯು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಮುನ್ಸಿಪಾಲಿಟಿ ಚೇರ್​ ಪರ್ಸನ್​ ಪಲ್ಲಬ್​ ದಾಸ್​, ಈ ಘಟನೆಯ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಕೋವಿಡ್​ 19 ಲಸಿಕೆ ಪಡೆಯಲು ಶಾರ್ಟ್ಸ್​ ಧರಿಸಿ ಬರಬಾರದು ಎಂಬ ಯಾವುದೇ ನಿಯಮವಿಲ್ಲ. ಈ ಬಗ್ಗೆ ನಾನು ತನಿಖೆ ನಡೆಸುತ್ತೇನೆ. ಈ ಸಮಸ್ಯೆಗೆ ಒಳಗಾದ ಯುವಕ ನನ್ನನ್ನ ಸಂಪರ್ಕ ಮಾಡಲಿ ಎಂದು ಕೋರುತ್ತೇನೆ ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...