ಡಿಜಿಟಲ್ ಡೆಸ್ಕ್ : ಕಳೆದ ತಿಂಗಳು ಕೇರಳ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಭೂ ಕುಸಿತ ಸಂಭವಿಸಿದ ಕೂಡಲೇ ವಯನಾಡು ನೆರವಿಗೆ ಧಾವಿಸಿದ ‘ಭಾರತೀಯ ಸೇನೆ’ ಹಗಲು ರಾತ್ರಿ ಎನ್ನದೇ ವಯನಾಡು ಜನರನ್ನು ರಕ್ಷಣೆ ಮಾಡಿದ್ದಾರೆ.
ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭಾರತೀಯ ಸೇನಾ ಸಿಬ್ಬಂದಿಗೆ ವಯನಾಡು ನಿವಾಸಿಗಳು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.
ಕೊಚ್ಚಿ ಡಿಫೆನ್ಸ್ ಪಬ್ಲಿಕ್ ರಿಲೇಶನ್ಸ್ ಆಫೀಸರ್ (ಪಿಆರ್ಒ) ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಸೈನಿಕರು ತಮ್ಮ ವಸತಿಗೃಹವನ್ನು ತೊರೆಯುವಾಗ ಸ್ಥಳೀಯರಿಂದ ಚಪ್ಪಾಳೆ ಪಡೆಯುತ್ತಿರುವುದನ್ನು ಕಾಣಬಹುದು. ಪ್ರಾದೇಶಿಕ ಸೇನೆಯ 122 ಇನ್ಫೆಂಟ್ರಿ ಬೆಟಾಲಿಯನ್ ಸೈನಿಕರನ್ನು ಮೌಂಟ್ ಟ್ಯಾಬೋರ್ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ಸನ್ಮಾನಿಸಿದರು.
“ಭೂಕುಸಿತ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಜನರನ್ನು ಕಾಪಾಡಿದ ಧೈರ್ಯಶಾಲಿ ವೀರರಿಗೆ ನಾವು ತುಂಬಾ ಕೃತಜ್ಞರಾಗಿದ್ದೇವೆ. ನಿಮ್ಮ ಧೈರ್ಯ ಮತ್ತು ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ” ಎಂದು ಕೊಚ್ಚಿ ಡಿಫೆನ್ಸ್ ಪಿಆರ್ಒ ಟ್ವೀಟ್ ಮಾಡಿದ್ದಾರೆ.