ಕ್ರಿಕೆಟ್ ಮೈದಾನದಲ್ಲಿ ರಿಯಾಕ್ಷನ್ ಕೊಡುವುದರಲ್ಲಿ ಕಿಂಗ್ ಕೊಹ್ಲಿ ಎತ್ತಿದ ಕೈ. ಎದುರಾಳಿಯ ವಿಕೆಟ್ ಬಿದ್ದಾಗಲಂತೂ ಅವರ ಪ್ರತಿಕ್ರಿಯೆ ಭಯಂಕರವಾಗಿರುತ್ತದೆ.
ರೋಚಕವಾಗಿದ್ದ ಐಪಿಎಲ್ 2022ರ ಎಲಿಮಿನೇಟರ್ ಹಲವು ಶ್ರೇಷ್ಠ ಕ್ಷಣಗಳನ್ನು ಹೊಂದಿತ್ತು. ರಜತ್ ಪಾಟಿದಾರ್ ಅಮೋಘ ಶತಕ, ಡೆತ್ ಓವರ್‌ಗಳಲ್ಲಿ ದಿನೇಶ್ ಕಾರ್ತಿಕ್ ನಿರ್ಣಾಯಕ ಬೌಂಡರಿಗಳು, ಕೆ.ಎಲ್. ರಾಹುಲ್ ಮತ್ತು ದೀಪಕ್ ಹೂಡಾ ಅವರ ಉತ್ಸಾಹಭರಿತ ಚೇಸ್ ಮತ್ತು ಡೆತ್ ಓವರ್‌ಗಳಲ್ಲಿ ಹರ್ಷಲ್ ಪಟೇಲ್ ಶ್ರೇಷ್ಠ ಎಸೆತ, ಇವೆಲ್ಲವೂ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತ್ತು.
SHOCKING NEWS: ತಾಯಿ ಸಾವಿನಿಂದ ಮನನೊಂದ ಮಗ ಆತ್ಮಹತ್ಯೆಗೆ ಶರಣು
ಅಂತಿಮ ಓವರ್‌ನಲ್ಲಿ ಎಲ್ ಎಸ್ ಜಿ ಗೆಲುವಿಗೆ 24 ರನ್‌ಗಳ ಅಗತ್ಯವಿತ್ತು. ಶ್ರೀಲಂಕಾದ ವೇಗಿ ದುಷ್ಮಂತ ಚಮೀರ ಇನಿಂಗ್ಸ್‌ನ 20 ನೇ ಓವರ್‌ನ ಹರ್ಷಲ್ ಮೂರನೇ ಎಸೆತವನ್ನು ಬಲವಾಗಿ ಹೊಡೆದರು. ಹರ್ಷಲ್ ಮುಂದಿನ ಎಸೆತಕ್ಕೆ ತನ್ನ ಬೌಲಿಂಗ್ ರನ್‌ಅಪ್‌ನ ತಲುಪಿದಂತೆಯೇ, ಈಡನ್ ಗಾರ್ಡನ್ಸ್‌ನ ಪಿಚ್‌ನತ್ತ ಒಬ್ಬ ಅಭಿಮಾನಿ ನುಗ್ಗಿಬರಲು ಯತ್ನಿಸಿದಾಗ ಪಂದ್ಯವನ್ನು ಕೆಲವು ಕ್ಷಣಗಳ ಮಟ್ಟಿಗೆ ನಿಲ್ಲಿಸಬೇಕಾಯಿತು.
ಆ ಕ್ರಿಕೆಟ್ ಅಭಿಮಾನಿ ಪಿಚ್‌ನತ್ತ ಧಾವಿಸುವುದನ್ನು ಕ್ರೀಡಾಂಗಣದ ವಿಭಾಗದಲ್ಲಿ ಕುಳಿತಿದ್ದ ಕೆಲವರು ವಿಡಿಯೊ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.
ಟ್ವಿಟ್ಟರ್‌ನಲ್ಲಿ ವೈರಲ್ ಆಗಿರುವ ವಿಡಿಯೋ ಪೈಕಿ ಒಂದರಲ್ಲಿ, ಕೋಲ್ಕತ್ತಾ ಪೊಲೀಸರು ಆತನನ್ನು ಅನಾಮತ್ತಾಗಿ ಭುಜದ ಮೇಲೆ ಎತ್ತಿಕೊಂಡು ಮೈದಾನದ ಹೊರಗೆ ಕೊಂಡೊಯ್ದರು.
ಅಲ್ಲೇ ಸಮೀಪದಲ್ಲಿದ್ದ ಕೊಹ್ಲಿ, ಪೊಲೀಸರ ಕಾರ್ಯಾಚರಣೆಯನ್ನು ಅನುಕರಿಸುವಂತೆ ತೋರಿಸಿ ಎಪಿಕ್ ರಿಪ್ಲೇ ನೀಡಿದ್ದು, ಇದು ಅಭಿಮಾನಿಗಳನ್ನು ಖುಷಿಪಡಿಸಿದೆ.
https://twitter.com/ZlxComfort/status/1529709824216248321?ref_src=twsrc%5Etfw%7Ctwcamp%5Etweetembed%7Ctwterm%5E1529709824216248321%7Ctwgr%5E%7Ctwcon%5Es1_&ref_url=https%3A%2F%2Fsports.ndtv.com%2Fipl-2022%2Fwatch-virat-kohlis-epic-reaction-as-policeman-carries-pitch-invader-on-shoulder-3011423