alex Certify ಸೋಲಿನ ನಂತರವೂ ತಂಡದ ಆಟಗಾರರನ್ನು ಹುರಿದುಂಬಿಸಿದ ವಿರಾಟ್ ಕೊಹ್ಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಲಿನ ನಂತರವೂ ತಂಡದ ಆಟಗಾರರನ್ನು ಹುರಿದುಂಬಿಸಿದ ವಿರಾಟ್ ಕೊಹ್ಲಿ

Watch: Virat Kohli Tries to Motivate RCB Teammates After Embarrassing Loss to KKRಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್ ಸಿ ಬಿ ತಂಡ ಸೋಲನ್ನನುಭವಿಸಿದ್ದು ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ತಮ್ಮ ತಂಡದ ಫಲಿತಾಂಶದಿಂದ ನಾಯಕ ವಿರಾಟ್ ಕೊಹ್ಲಿ ಅಸಮಾಧಾನಗೊಂಡಿದ್ದರು.

ಈ ಬಗ್ಗೆ ಡ್ರೆಸ್ಸಿಂಗ್ ರೂಂನಲ್ಲಿ ತಂಡವನ್ನು ಉದ್ದೇಶಿಸಿ ಮಾತನಾಡಿದ ವಿರಾಟ್ ಕೊಹ್ಲಿ, ತನ್ನ ಆಟಗಾರರಿಗೆ ಫಲಿತಾಂಶವನ್ನು ಸ್ವೀಕರಿಸಿ ಉತ್ತಮ ಉದ್ದೇಶದಿಂದ ಮುಂದುವರಿಯುವಂತೆ ಕೇಳಿಕೊಂಡಿದ್ದಾರೆ. “ನಾವು ಸೋಲನ್ನು ತಕ್ಷಣವೇ ಒಪ್ಪಿಕೊಳ್ಳುವುದು ಮತ್ತು ಸಮಾಧಾನದಿಂದ ಇರುವುದು ಉತ್ತಮ. ಹಾಗಂತ ನಾವು ಮುಂದಿನದನ್ನು ಎದುರು ನೋಡುವುದಿಲ್ಲ ಎಂದು ಅರ್ಥವಲ್ಲ. ಆದರೆ, ಮತ್ತೆ ನಮ್ಮ ಫೀಲ್ಡಿಗೆ ಬರಲು ಈ ಸೋಲು ನಮಗೆ ಹೆಚ್ಚು ಹಸಿವನ್ನು ನೀಡುವಂತಾಗಬೇಕು. ಈ ಟೂರ್ನಿಯಲ್ಲಿ ಉತ್ತಮವಾಗಿ ಆಡಿ” ಎಂದು ಕೊಹ್ಲಿ ಇತರೆ ಕ್ರಿಕೆಟಿಗರನ್ನುದ್ದೇಶಿಸಿ ಹೇಳಿದ್ದಾರೆ.

ಅಲ್ಲದೆ “ಪಂದ್ಯಾವಳಿಯಲ್ಲಿ ಎಲ್ಲಾ ಸಮಯದಲ್ಲೂ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಹಾಗೂ ತಮಗಾದ ಸೋಲಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸಬಾರದು ಎಂದು ಕೊಹ್ಲಿ ಹೇಳಿದ್ದಾರೆ. ಈ ವಿಡಿಯೋವನ್ನು ಆರ್‌ಸಿಬಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಸೋಲಿನೊಂದಿಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.

https://www.instagram.com/p/CUEY-tgBmDI/?utm_source=ig_embed&ig_rid=07c255b4-cb08-4959-b130-bc8228ea4939

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Pokud přidáte tuto složku – Proč se zamlžují okna v autě: příčiny Okroshka: дешевое лекарство со скорыми результатами в унитазной чашке Jak si umýt vlasy a vyléčit Jak efektivně odstranit skvrny z ubrusů: tipy pro Jarní superpotravina: recept