ಬಂದೂಕು ಹಿಡಿದು ದರೋಡೆ ಮಾಡಲು ಬಂದವನಿಗೆ ಅಲ್ಲಿಯೇ ಇದ್ದ ಮಹಿಳೆಯೊಬ್ಬಳು ಸರಿಯಾದ ಪಾಠ ಕಲಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಬಂದೂಕು ಹಿಡಿದು ಗುಂಪಿನ ಬಳಿ ದರೋಡೆಕೋರ ಬರುತ್ತಾನೆ. ಆದರೆ, ಗುಂಪಿನಲ್ಲಿದ್ದ ಮಹಿಳೆಯೊಬ್ಬರು ತಮ್ಮ ಬಳಿಯೂ ಬಂದೂಕು ಇರುವುದನ್ನು ಆತನಿಗೆ ತೋರಿಸುತ್ತಾರೆ.
ತಕ್ಷಣವೇ ಮಹಿಳೆ ದರೋಡೆಕೋರನಿಗೆ ಗುಂಡು ಹಾರಿಸುತ್ತಾರೆ. ಇದರಿಂದ ಆತ ಗಾಯಗೊಂಡು ನೋವಿನಿಂದ ನರಳುತ್ತಾ ತನ್ನ ಬಂದೂಕನ್ನು ಕೆಳಗೆ ಇಡುತ್ತಾನೆ. ಮಹಿಳೆಯ ಧೈರ್ಯದಿಂದ ದರೋಡೆ ವಿಫಲವಾಗುತ್ತದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ನೆಟ್ಟಿಗರು ಮಹಿಳೆಯ ಧೈರ್ಯವನ್ನು ಶ್ಲಾಘಿಸಿದ್ದಾರೆ. ಒಬ್ಬ ಬಳಕೆದಾರರು ಆಕೆಯನ್ನು “ಬ್ರೆಜಿಲಿಯನ್ ಸೂಪರ್ ತಾಯಿ” ಎಂದು ಕರೆದರೆ, ಇನ್ನೊಬ್ಬರು “ಆಕೆ ಅಂದು ಯಾರದ್ದೋ ಜೀವ ಉಳಿಸಿದಳು” ಎಂದು ಬರೆದಿದ್ದಾರೆ.
— Shocking Cctv Moments (@shockcctvclip) March 30, 2025