ಮೆಕ್ಸಿಕೋದ ಮಾಂಟೆರ್ರೆಯ ಕಾರ್ನೆಸ್ ಕೇರ್ಸ್ ಅಂಗಡಿಯಲ್ಲಿ ನಡೆದ ದರೋಡೆ ಪ್ರಯತ್ನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹೂಡಿ ಧರಿಸಿದ ಯುವಕ ಬಂದೂಕು ತೋರಿಸಿ ಅಂಗಡಿಯ ಕ್ಯಾಷಿಯರ್‌ನಿಂದ ಹಣ ಕದಿಯಲು ಪ್ರಯತ್ನಿಸಿದ್ದು, ಈ ಸಂದರ್ಭದಲ್ಲಿ, ಕೌಬಾಯ್ ಟೋಪಿ, ಕನ್ನಡಕ ಧರಿಸಿದ್ದ ವೃದ್ಧ ವ್ಯಕ್ತಿಯೊಬ್ಬರು ಅಂಗಡಿಯಲ್ಲಿದ್ದರು. ದರೋಡೆಕೋರ ಆತನ ಕಡೆಗೆ ಬಂದೂಕು ತಿರುಗಿಸಿದರೂ, ಅವರು ಭಯಪಡದೆ ಶಾಂತವಾಗಿದ್ದರು.
ದರೋಡೆಕೋರ ತನ್ನ ಗಮನವನ್ನು ಬೇರೆಡೆಗೆ ತಿರುಗಿಸಿದಾಗ, ವೃದ್ಧ ಆತನ ಮೇಲೆ ದಾಳಿ ಮಾಡಿ ಬಂದೂಕನ್ನು ಕಿತ್ತುಕೊಂಡರು. ಅಂಗಡಿಯ ಉದ್ಯೋಗಿಯೊಬ್ಬರು ಬಂದೂಕನ್ನು ತೆಗೆದುಕೊಂಡು ಭದ್ರಪಡಿಸಿದರು. ನಂತರ, ವೃದ್ಧ ಮತ್ತು ಅಂಗಡಿಯ ಸಿಬ್ಬಂದಿ ದರೋಡೆಕೋರನನ್ನು ಹಿಡಿದು ನೆಲಕ್ಕೆ ಕೆಡವಿದ್ದು, ಪೊಲೀಸರು ಬರುವವರೆಗೂ ಅವರು ದರೋಡೆಕೋರನನ್ನು ಹಿಡಿದಿಟ್ಟುಕೊಂಡರು. ಈ ಘಟನೆ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜನರು ವೃದ್ಧನ ಧೈರ್ಯ ಮತ್ತು ತ್ವರಿತ ಪ್ರತಿಕ್ರಿಯೆಯನ್ನು ಶ್ಲಾಘಿಸಿದ್ದಾರೆ. ಅವರನ್ನು ನೈಜ-ಜೀವನದ ಆಕ್ಷನ್ ಹೀರೋ ಎಂದು ಕರೆಯಲಾಗಿದೆ. ಅವರ ಧೈರ್ಯ ಮತ್ತು ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.
him preparing by putting his glasses away, was like a scene for a movie pic.twitter.com/yLkvoqkKGN
— non aesthetic things (@PicturesFoIder) March 22, 2025