alex Certify WATCH VIDEO : ಶೋಕಿಗಾಗಿ ರಸ್ತೆ ಮೇಲೆ ಹಣ ಎಸೆದು ‘ರೀಲ್ಸ್’ ಮಾಡಿದ ಯೂಟ್ಯೂಬರ್ ಅರೆಸ್ಟ್.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WATCH VIDEO : ಶೋಕಿಗಾಗಿ ರಸ್ತೆ ಮೇಲೆ ಹಣ ಎಸೆದು ‘ರೀಲ್ಸ್’ ಮಾಡಿದ ಯೂಟ್ಯೂಬರ್ ಅರೆಸ್ಟ್.!

ಹೈದರಾಬಾದ್ ನ ಕುಕಟ್ಪಲ್ಲಿ ಎಂಬಲ್ಲಿ ಯುವಕನೊಬ್ಬ ಜನನಿಬಿಡ ರಸ್ತೆಯಲ್ಲಿ ಹಣ ಸುರಿದು ರೀಲ್ಸ್ ಮಾಡಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಆತನನ್ನು ಬಂಧಿಸಲಾಗಿದೆ.

ಹಣದ ಕಂತೆಯನ್ನು ಗಾಳಿಯಲ್ಲಿ ಎಸೆಯುವ ವೀಡಿಯೊ ವೈರಲ್ ಆಗಿದೆ. ‘its_me_power’ ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ಹಣ ರಸ್ತೆಯಲ್ಲಿ ಬೀಳುತ್ತಿದ್ದಂತೆ ಜನರು ಓಡಿಬಂದು ನೋಟುಗಳನ್ನು ಆರಿಸಿಕೊಂಡಿದ್ದಾರೆ.

ಎರಡೂ ಕೈಗಳಲ್ಲಿ ನೋಟುಗಳನ್ನು ಹಿಡಿದುಕೊಂಡು ರಸ್ತೆಯ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಅಲ್ಲಿ ಹಣವನ್ನು ಸುರಿದಿದ್ದಾನೆ. ಈ ಘಟನೆಯನ್ನು ದಾರಿಹೋಕರು ರೆಕಾರ್ಡ್ ಮಾಡಿದ್ದಾರೆ ಮತ್ತು ಅವರ ಸಹ ಸ್ನೇಹಿತ ಇದನ್ನು ಎಡಿಟ್ ಮಾಡಿ ಮ್ಯೂಸಿಕ್ ಹಾಕಿ ವಿಡಿಯೋ ಹರಿಬಿಟ್ಟಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...