
ಸಂಜು ಚೌರಿ ಎಂಬಾತ ತನ್ನ ಗೆಳೆಯನ ಜೊತೆಯಲ್ಲಿ ವಿಡಿಯೋ ರೆಕಾರ್ಡ್ ಮಾಡಲೆಂದು ರೈಲ್ವೆ ಹಳಿ ಬಳಿ ತೆರಳಿದ್ದ. ರೈಲ್ವೆ ಬರುತ್ತಿದ್ದ ವೇಳೆ ತಾನು ನಡೆದುಕೊಂಡು ಬರುತ್ತಿರುವ ಹಾಗೆ ವಿಡಿಯೋ ಚಿತ್ರೀಕರಿಸಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದು ಆತನ ಉದ್ದೇಶವಾಗಿತ್ತು.
ಆದರೆ ವಿಧಿಯ ಆಟ ಬೇರೆಯದ್ದೇ ಇತ್ತು. ರೈಲು ಹಳಿಯ ಪಕ್ಕದಲ್ಲೇ ಇದ್ದ ಸಂಜುಗೆ ಹಿಂಬದಿಯಿಂದ ರೈಲು ಬಂದು ಬಡಿದಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಸಂಜುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆತ ಸಾವನ್ನಪ್ಪಿದ್ದಾನೆ. ಈ ದುರಂತದ ಸಂಪೂರ್ಣ ದೃಶ್ಯವನ್ನು ಜೊತೆಯಲ್ಲಿದ್ದ ಗೆಳೆಯ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ.
ಪಂಜಾರಾ ಕಾಲೋನಿ ನಿವಾಸಿಯಾಗಿದ್ದ ಸಂಜು ಚೌರೆ ಇನ್ಸ್ಟಾಗ್ರಾಂ ರೀಲ್ಸ್ ಮಾಡುವ ಹವ್ಯಾಸ ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ಭಾನುವಾರ ಕೂಡ ರೀಲ್ಸ್ ಮಾಡಲು ಹೋಗಿ ಜೀವ ತೆತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.