alex Certify WATCH VIDEO : ಬಂತು ನೋಡಿ ‘BSNL 5 G ಸಿಮ್’ ; ಅನ್ ಬಾಕ್ಸಿಂಗ್ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WATCH VIDEO : ಬಂತು ನೋಡಿ ‘BSNL 5 G ಸಿಮ್’ ; ಅನ್ ಬಾಕ್ಸಿಂಗ್ ವಿಡಿಯೋ ವೈರಲ್

ಜಿಯೋ ಹಾಗೂ ಏರ್ ಟೆಲ್ ಗೆ ಟಕ್ಕರ್ ನೀಡಲು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಮುನ್ನುಗ್ಗುತ್ತಿದೆ.ಮುಂಬರುವ ವರ್ಷಗಳಲ್ಲಿ ರಾಷ್ಟ್ರವ್ಯಾಪಿ 5 ಜ ವಿಸ್ತರಿಸಲು ಬಿಎಸ್ ಎನ್ ಸಜ್ಜಾಗಿದೆ. ಇದರ ನಡುವೆ 5 ಜಿ ಸಿಮ್ ಅನ್ ಬಾಕ್ಸಿಂಗ್ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವರದಿಯ ಪ್ರಕಾರ, ದೇಶೀಯ ಟೆಲಿಕಾಂ ಕಂಪನಿಗಳ ಗುಂಪು ಬಿಎಸ್ಎನ್ಎಲ್ ಇನ್ಫ್ರಾವನ್ನು ಬಳಸಿಕೊಂಡು ಸಾರ್ವಜನಿಕ ಬಳಕೆಗಾಗಿ 5 ಜಿ ಪ್ರಯೋಗಗಳನ್ನು ನೀಡಲು ಸಿದ್ಧವಾಗಿದೆ. ಈ ಉದ್ಯಮ ಗುಂಪಿನಲ್ಲಿ ಟಾಟಾ ಕನ್ಸಲ್ಟೆನ್ಸಿ, ತೇಜಸ್ ನೆಟ್ವರ್ಕ್ಸ್, ವಿಎನ್ಎಲ್, ಯುನೈಟೆಡ್ ಟೆಲಿಕಾಂ, ಕೋರಲ್ ಟೆಲಿಕಾಂ ಮತ್ತು ಎಚ್ಎಫ್ಸಿಎಲ್ ಸೇರಿವೆ. ಬಿಎಸ್ಎನ್ಎಲ್ ನೆಟ್ವರ್ಕ್ ಬಳಸಿ 5 ಜಿ ಪ್ರಯೋಗಗಳನ್ನು ನಡೆಸಲು ಅವರು ಸಜ್ಜಾಗಿದ್ದಾರೆ.

ಸರ್ಕಾರವು 700 ಮೆಗಾಹರ್ಟ್ಸ್, 2200 ಮೆಗಾಹರ್ಟ್ಸ್, 3300 ಮೆಗಾಹರ್ಟ್ಸ್ ಮತ್ತು 26 ಗಿಗಾಹರ್ಟ್ಸ್ ಸ್ಪೆಕ್ಟ್ರಮ್ ಬ್ಯಾಂಡ್ಗಳನ್ನು ಬಿಎಸ್ಎನ್ಎಲ್ ಗೆ ಹಂಚಿಕೆ ಮಾಡಿದೆ. ಈ ಮೂಲಕ ಬಿಎಸ್ಎನ್ಎಲ್ ದೇಶಾದ್ಯಂತ 4 ಜಿ ಮತ್ತು 5 ಜಿ ನೆಟ್ವರ್ಕ್ ಗಳನ್ನು ಒದಗಿಸಲಿದೆ.ಮಹಾರಾಷ್ಟ್ರದ ಬಿಎಸ್ಎನ್ಎಲ್ ಕಚೇರಿಯಿಂದ ಉದ್ಯೋಗಿಗಳು ಸಿಮ್ ನ್ನು ಅನ್ಬಾಕ್ಸಿಂಗ್ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ವೈರಲ್ ವೀಡಿಯೊದಲ್ಲಿ, ಬಿಎಸ್ಎನ್ಎಲ್ ಸಿಮ್ಗಳನ್ನು 5 ಜಿ ಲೋಗೋದೊಂದಿಗೆ ಕಾಣಬಹುದು.

 

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...