alex Certify WATCH VIDEO : ಮೆಚ್ಚುಗೆಗೆ ಪಾತ್ರವಾಗಿದೆ ಟ್ರಾಫಿಕ್ ಪೊಲೀಸರು ಮಾಡಿರುವ ಈ ಪ್ರಶಂಸನೀಯ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WATCH VIDEO : ಮೆಚ್ಚುಗೆಗೆ ಪಾತ್ರವಾಗಿದೆ ಟ್ರಾಫಿಕ್ ಪೊಲೀಸರು ಮಾಡಿರುವ ಈ ಪ್ರಶಂಸನೀಯ ಕೆಲಸ

ಇತ್ತೀಚೆಗಂತೂ ರೂಲ್ಸ್ ಬ್ರೇಕ್ ಮಾಡುವ ವಾಹನ ಸವಾರರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಇತ್ತೀಚಿನ ಯುವಕರು ಹೆಲ್ಮೆಟ್ ಧರಿಸುವುದಕ್ಕೆ ಕೇಳಲ್ಲ. ಹೆಲ್ಮೆಟ್ ಧರಿಸದೇ ಪೊಲೀಸರ ಕೈಗೆ ಸಿಕ್ಕಿಬಿದ್ದು 500-1000 ಫೈನ್ ಕಟ್ಟುತ್ತಾರೆ.

ಅದಕ್ಕಾಗಿ ತೆಲಂಗಾಣದಲ್ಲಿ ಪೊಲೀಸರು ಚಾಣಾಕ್ಷ ತಂತ್ರ ಮಾಡಿದ್ದಾರೆ. ಪೊಲೀಸರು ಇದ್ದಾರೆ ಎಂದು ಭಾವಿಸಿ ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.

ಸ್ಕೂಟರ್ ನಲ್ಲಿ ಇಬ್ಬರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ರಸ್ತೆಯಲ್ಲಿ ‘ಪೊಲೀಸ್’ ಅನ್ನು ಗಮನಿಸಿದ ನಂತರ ಚಾಲಕ ತನ್ನ ಹೆಲ್ಮೆಟ್ ಧರಿಸುತ್ತಾನೆ.ಹೌದು. ಇದು ನಿಯಮ ಉಲ್ಲಂಘಿಸುವವರನ್ನು ತಡೆಯಲು ರಸ್ತೆಯಲ್ಲಿ ಇರಿಸಲಾದ ಕಾರ್ಡ್ಬೋರ್ಡ್ ಕಟೌಟ್ .ದೂರದಿಂದ ಈ ಕಟೌಟ್ ನೋಡಿದರೆ ನಿಜವಾದ ಪೊಲೀಸ್ ನಿಂತಿದ್ದಾರೆ ಎಂದು ಕಾಣುತ್ತದೆ. ಈ ವೀಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದ್ದು, ತೆಲಂಗಾಣ ಪೊಲೀಸರ ಚಾಣಾಕ್ಷತೆಗೆ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...