ಲೇಹ್: 10 ನೇ ಅಂತರರಾಷ್ಟ್ರೀಯ ಯೋಗ ದಿನದಂದು ಭಾರತೀಯ ಸೇನಾ ಸಿಬ್ಬಂದಿ ಉತ್ತರ ಗಡಿಯಲ್ಲಿ ಹಿಮಪಾತದ ಎತ್ತರದಲ್ಲಿ ಯೋಗ ಪ್ರದರ್ಶನ ನೀಡಿದರು.
ಕೊರೆವ ಚಳಿಯನ್ನೂ ಲೆಕ್ಕಿಸದೇ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಸಿಕ್ಕಿಂನ ಮುಗುಥಾಂಗ್ ಉಪ ವಲಯದಲ್ಲಿ 15,000 ಅಡಿ ಎತ್ತರದಲ್ಲಿ ಯೋಗ ಪ್ರದರ್ಶನ ನೀಡಿದರು.ಸಿಕ್ಕಿಂ, ಅರುಣಾಚಲ ಪ್ರದೇಶ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ ಭಾರತ-ಚೀನಾ ಗಡಿಯಲ್ಲಿರುವ ವಿವಿಧ ಎತ್ತರದ ಹಿಮಾಲಯ ಶ್ರೇಣಿಗಳಲ್ಲಿ ಯೋಗಾಸನ ಪ್ರದರ್ಶಿಸಲಾಗಿದೆ. ಅಮೃತಸರದ ಅಟ್ಟಾರಿಯಲ್ಲಿರುವ ಜಂಟಿ ಚೆಕ್ ಪೋಸ್ಟ್ನಲ್ಲಿ ಬಿಎಸ್ಎಫ್ ಜವಾನರು ಯೋಗ ಮಾಡುತ್ತಿರುವ ದೃಶ್ಯಗಳನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಪೋಸ್ಟ್ ಮಾಡಿದ್ದಾರೆ.
ಅಂತರರಾಷ್ಟ್ರೀಯ ಯೋಗ ದಿನದ ಹಿನ್ನೆಲೆ ದೇಶದ ಮೂಲೆ ಮೂಲೆಯಲ್ಲಿ ಜನರು ಯೋಗಾಚರಣೆ ಮಾಡುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಪ್ರಧಾನಿ ಮೋದಿ ಕೂಡ ಯೋಗ ಪ್ರದರ್ಶನ ನೀಡಿದ್ದಾರೆ.