ಚೀನಾದ ಶಾಂಘೈನಲ್ಲಿ ವೃದ್ಧ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಭಾವಿಸಿ ಶವಾಗಾರಕ್ಕೆ ರವಾನೆ ಮಾಡಿದ ಆಸ್ಪತ್ರೆಯೊಂದರ ನಾಲ್ವರು ಅಧಿಕಾರಿಗಳನ್ನು ಅಲ್ಲಿನ ಸರ್ಕಾರ ಸೇವೆಯಿಂದ ವಜಾ ಮಾಡಿದೆ.
ಶವಾಗಾರದ ಇಬ್ಬರು ಸಿಬ್ಬಂದಿ ವೃದ್ಧ ರೋಗಿಯನ್ನು ಬ್ಯಾಗ್ ನಲ್ಲಿ ಪ್ಯಾಕ್ ಮಾಡಿ ವಾಹನದೊಳಗೆ ಹಾಕುತ್ತಿರುವ ವಿಡಿಯೋ ಭಾನುವಾರ ವೈರಲ್ ಆಗಿದೆ.
ಇದಾದ ಬಳಿಕ ಸಿಬ್ಬಂದಿಯಲ್ಲಿ ಓರ್ವ ಚೀಲದಿಂದ ರೋಗಿಯನ್ನು ಹೊರ ತೆಗೆಯಲು ಆರಂಭಿಸಿದಾಗ ಆಶ್ಚರ್ಯ ಕಾದಿತ್ತು. ಚೀಲವನ್ನು ಓಪನ್ ಮಾಡುತ್ತಿದ್ದಂತೆಯೇ ರೋಗಿ ಬದುಕಿರುವುದು ಕಂಡು ಬಂದಿದೆ. ಈ ವಿಡಿಯೋ ಚೀನಾದ ವಿಬೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆಯೇ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
Shocking News: ಕೇಂದ್ರ ಸಚಿವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪರದೆ ಮೇಲೆ ನೀಲಿ ಚಿತ್ರ ಪ್ರಸಾರ
ಚೀನಾದ ಅತ್ಯಂತ ಅಭಿವೃದ್ಧಿಶೀಲ ಮತ್ತು ಆಧುನಿಕವಾದ ಶಾಂಘೈನಂತಹ ನಗರದಲ್ಲಿ ಇಂತಹ ಹೇಯಕೃತ್ಯ ಮತ್ತು ಪ್ರಮಾದ ನಡೆದಿರುವುದಕ್ಕೆ ಅಲ್ಲಿನ ಜನರು ಕಿಡಿ ಕಾರಿದ್ದಾರೆ.
ಒಂದು ವೇಳೆ ಬದುಕಿರುವುದು ಅರಿವಿಗೆ ಬಾರದೇ ಇದ್ದಲ್ಲಿ ಜೀವಂತ ವ್ಯಕ್ತಿಯನ್ನು ಶವಾಗಾರದಲ್ಲಿ ಸುಟ್ಟು ಹಾಕುತ್ತಿದ್ದರು ಅಥವಾ ಹೂತು ಬಿಡುತ್ತಿದ್ದರು. ಎಂತಹ ದುರ್ವಿಧಿಗೆ ಈ ಸಿಬ್ಬಂದಿ ಕಾರಣವಾಗುತ್ತಿದ್ದರು. ಸರ್ಕಾರ ಯಾವುದೇ ಎಚ್ಚರಿಕೆ ತೆಗೆದುಕೊಂಡಿಲ್ಲ ಎಂದು ಅನೇಕ ಜನರು ತಮ್ಮ ಸಿಟ್ಟನ್ನು ತೋಡಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ನಾಲ್ವರು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಿದ್ದಾರೆ.