ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧ ಅನೂಹ್ಯವಾದದ್ದು. ಅದು ಸಾಕು ಪ್ರಾಣಿಯೇ ಆಗಿರಬಹುದು ಅಥವಾ ಇನ್ನಾವುದೇ ಪ್ರಾಣಿ, ಪಕ್ಷಿಗಳಾಗಿರಬಹುದು. ಕೆಲವು ಪ್ರಾಣಿ- ಪಕ್ಷಿಗಳು ಕೂಡ ಮನುಷ್ಯನನ್ನು ತುಂಬಾ ಪ್ರೀತಿಸಿಬಿಡುತ್ತವೆ. ಅಂಥದ್ದೇ ಒಂದು ಅಪರೂಪದ ಪ್ರೀತಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ನೀರಿನೊಳಗೆ ಹೋದ ವ್ಯಕ್ತಿಯೊಬ್ಬ ಅಲ್ಲಿರುವ ಶಾರ್ಕ್ನೊಟ್ಟಿಗೆ ನೃತ್ಯ ಮಾಡಿರುವ ಸೊಗಸಾದ ವಿಡಿಯೋ ಇದಾಗಿದೆ. ಟ್ವಿಟರ್ನಲ್ಲಿ ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.
ವಿಡಿಯೋದಲ್ಲಿ ವ್ಯಕ್ತಿ ಹಾಗೂ ಶಾರ್ಕ್ ಅರ್ಧ ನೀರಿನಲ್ಲಿ ಮುಳುಗಿ ನೃತ್ಯ ಮಾಡುವುದನ್ನು ನೋಡಬಹುದಾಗಿದೆ. ಹುಡುಗ ಮತ್ತು ಹುಡುಗಿ ಇಬ್ಬರೂ ರೊಮಾಂಟಿಕ್ ಆಗಿ ನರ್ತಿಸುತ್ತಿರುವಂತೆ ಇದು ತೋರುತ್ತಿರುವುದಾಗಿ ಹಲವಾರು ಕಮೆಂಟ್ಗಳು ಬಂದಿವೆ. ಇದಕ್ಕೆ ಕಾರಣ, ರೊಮಾಂಟಿಕ್ ಎನಿಸುವ ಹಿನ್ನೆಲೆ ಗಾಯನಕ್ಕೆ ಈ ಜೋಡಿ ನರ್ತಿಸಿದ್ದು, ಇದು ನೆಟ್ಟಿಗರ ಮನಸೂರೆಗೊಂಡಿದೆ. 16 ಸೆಕೆಂಡ್ಗಳ ಈ ವಿಡಿಯೋ ಇದಾಗಲೇ ಲಕ್ಷಕ್ಕೂ ಅಧಿಕ ವ್ಯೂಸ್ ಕಂಡಿದೆ.
https://twitter.com/rachel_da_bagel/status/1582581371133837312?ref_src=twsrc%5Etfw%7Ctwcamp%5Etweetembed%7Ctwterm%5E1582581371133837312%7Ctwgr%5E90ff9250d1e8cc247bbec356973bf37033aa7ae8%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-video-of-man-dancing-underwater-with-a-shark-is-viral-for-all-the-right-reasons-6214345.html