ಬಿಹಾರದ ಅರಾರಿಯಾದಲ್ಲಿ ಸೋಮವಾರ ಬಕ್ರಾ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆಯ ಒಂದು ಭಾಗ ಕುಸಿದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿಹಾರದ ಅರಾರಿಯಾದಲ್ಲಿರುವ ಸೇತುವೆ ಉದ್ಘಾಟನೆಗೂ ಮುನ್ನವೇ ನದಿಯಲ್ಲಿ ಕೊಚ್ಚಿ ಹೋಗಿದೆ. 12 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆಯನ್ನು ಇನ್ನೂ ಉದ್ಘಾಟಿಸಲಾಗಿಲ್ಲ. ವರದಿ ಪ್ರಕಾರ, ಅರಾರಿಯಾದ ಸಿಖ್ತಿ ಬ್ಲಾಕ್ ಮತ್ತು ಕುರ್ಸಕಟ್ಟಾ ಬ್ಲಾಕ್ ಅನ್ನು ಸಂಪರ್ಕಿಸುವ ಪದರಿಯಾ ಸೇತುವೆಯನ್ನು 12 ಕೋಟಿ ವೆಚ್ಚದಲ್ಲಿ ಪುನರಾರಂಭಿಸಲಾಗಿದೆ.
ಬಿಹಾರದ ಜೆಡಿಯು ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ, “ಡಬಲ್ ಎಂಜಿನ್ ಸರ್ಕಾರದ ಸೇತುವೆ ಉದ್ಘಾಟನೆಯಾಗುವ ಮೊದಲೇ ನೀರಿನಲ್ಲಿ ಕೊಚ್ಚಿಹೋಗಿದೆ ಎಂದಿದ್ದಾರೆ.