ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪರಿದಾಬಾದ್ ನ ಕೆಲ ವಿಡಿಯೋಗಳು ಈ ನಗರದಲ್ಲಿ ಏನಾಗುತ್ತಿದೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಹರಿಯಾಣ ಹಾಗೂ ದೆಹಲಿ ಮಧ್ಯ ಭಾಗದಲ್ಲಿರುವ ಪರಿದಾಬಾದ್ ನಗರದ ನಿವಾಸಿಯೊಬ್ಬರು ಕೆಲ ದಿನಗಳ ಹಿಂದೆ, ಕಟ್ಟಡದ ತುದಿಯಲ್ಲಿ ವರ್ಕೌಟ್ ಮಾಡಿದ್ದರು. ಪುಟ್ಟ ಮಗುವೊಂದನ್ನು ಸೀರೆಗೆ ಕಟ್ಟಿ ನೇತು ಬಿಡಲಾಗಿತ್ತು. ಈಗ ಮಹಿಳೆಯೊಬ್ಬರು ಮನೆಯ ಕಿಟಕಿಯಿಂದ ಹೊರಬಂದು, ಸ್ವಚ್ಛಗೊಳಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ವಲ್ಪ ಆಯ ತಪ್ಪಿದರೂ ಮಹಿಳೆ ಕಾಲು ಜಾರಿ ಬೀಳುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಅಪಘಾತ ತಪ್ಪಿದೆ. ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆ 45 ವರ್ಷದ, ಶಿಪ್ರಾ ರಿವೇರಾ ಸೊಸೈಟಿಯ ನಿವಾಸಿ. ಅದೇ ಸೊಸೈಟಿಯಲ್ಲಿದ್ದ ಶೃತಿ ಠಾಕೂರ್ ಎಂಬ ಮಹಿಳೆ ಈ ವಿಡಿಯೋವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.
BIG NEWS: ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ; ಮೂವರು ಆರೋಪಿಗಳು ಅರೆಸ್ಟ್
ಈ ಬಗ್ಗೆ ಮಾತನಾಡಿರುವ ಶೃತಿ, ನಾನು ಆಕೆಯನ್ನು ಆ ಪರಿಸ್ಥಿತಿಯಲ್ಲಿ ನೋಡಿದಾಕ್ಷಣ ಬೆಚ್ಚಿಬಿದ್ದೆ. ಆಕೆಯ ಗಮನ ಸೆಳೆಯಲು ಕೂಗಾಡಿದೆ, ಕಡೆಗೆ ಸಾಕಷ್ಟು ಬಾರಿ ಆಕೆಯ ಫೋನ್ ಗೆ ಕರೆ ಮಾಡಿದೆ. ಕೆಲಸದಲ್ಲಿ ಮಗ್ನರಾಗಿದ್ದ ಆಕೆ ಫೋನ್ ರಿಂಗಣಿಸಿದರು ಗಮನ ಕೊಡಲಿಲ‌್ಲ. ಸಮಯ ವ್ಯರ್ಥ ಮಾಡುವುದು ಬೇಡವೆಂದು ನನ್ನ ಮಗಳನ್ನು ಅವರ ಮನೆಗೆ ಕಳುಹಿಸಿದೆ. ಅದೃಷ್ಟವಶಾತ್ ಅವರು ಅಷ್ಟೊತ್ತಿಗಾಗಲೆ ತಮ್ಮ ಮನೆಗೆ ಹೋಗಿದ್ದರು, ಅವರು ಸುರಕ್ಷಿತವಾಗಿದ್ದಾರೆ ಎಂಬುದೇ ನನಗೆ ಸಮಾಧಾನ ಎಂದು ಘಟನೆಯನ್ನು ವಿವರಿಸಿದ್ದಾರೆ.
https://www.youtube.com/watch?v=_ViRUuSTPMw&feature=youtu.be