ಏರ್ ಇಂಡಿಯಾ ಸೇವೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ನಟ ಮನೋಜ್ ಜೋಶಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
‘ಚಾಣಕ್ಯ’ ಧಾರಾವಾಹಿಯಲ್ಲಿ ಚಾಣಕ್ಯ ಪಾತ್ರಧಾರಿಯಾಗಿ ಕಾಣಿಸಿಕೊಂಡಿರುವ ಮನೋಜ್ ಜೋಶಿಯವರು ಭೋಪಾಲ್ನಿಂದ ಮುಂಬೈಗೆ ಬರುವಾಗ ಇಂತಹ ಅನುಭವವಾಗಿದೆ. ಆರಂಭದಲ್ಲೇ ವಿಮಾನ 3 ಗಂಟೆ ತಡವಾಗಿ ಹೊರಟಿದೆ. ಅಷ್ಟು ಸಾಲದು ಎಂಬಂತೆ ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ಲಗೇಜ್ ಗಾಗಿ 40 ನಿಮಿಷ ಅವರು ಕಾದು ನಿಂತಿದ್ದಾರೆ.
ಈ ವಿಷಯವನ್ನು ಟ್ವಿಟರ್ ನಲ್ಲಿ ಬರೆದುಕೊಂಡಿರುವ ಮನೋಜ್ ಜೋಶಿ, ನಾನು ಭೋಪಾಲ್ನಿಂದ ಏರ್ ಇಂಡಿಯಾ ವಿಮಾನ 634ರಲ್ಲಿ ಬರುತ್ತಿದ್ದೆ. ವಿಮಾನ 3 ಗಂಟೆ ತಡವಾಗಿ ಹೊರಟಿದ್ದು, ಈಗ ಮುಂಬೈ ವಿಮಾನ ನಿಲ್ದಾಣದಲ್ಲಿ 40 ನಿಮಿಷಗಳಿಂದ ಬ್ಯಾಗೇಜ್ ಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ. ಜೊತೆಗೆ ವಿಡಿಯೋವನ್ನು ಸಹ ಮಾಡಿದ್ದಾರೆ.
ಅಚ್ಚರಿಯ ಸಂಗತಿ ಎಂದರೆ ಮನೋಜ್ ಜೋಶಿ ಅವರಿಗೆ ಮಾಹಿತಿ ನೀಡಲೂ ಸಹ ಸ್ಥಳದಲ್ಲಿ ಯಾರು ಇರಲಿಲ್ಲ ಎಂದು ಹೇಳಲಾಗಿದೆ. ಬಳಿಕ ಸಿಬ್ಬಂದಿ ಒಬ್ಬನ ಬಳಿ ತೆರಳಿ ಜೋರು ಮಾಡಿದಾಗ ಮನೋಜ್ ಜೋಶಿ ಅವರ ಸಮಸ್ಯೆಗೆ ಸ್ಪಂದಿಸಲಾಗಿದೆ.