ಗುಜರಾತ್ : ಅಂಕಲೇಶ್ವರದ ಲಾರ್ಡ್ಸ್ ಪ್ಲಾಜಾ ಹೋಟೆಲ್ ನಲ್ಲಿ ಎಂಜಿನಿಯರಿಂಗ್ ಕಂಪನಿ ಆಯೋಜಿಸಿದ್ದ ಸಂದರ್ಶನಕ್ಕಾಗಿ ನೂರಾರು ಉದ್ಯೋಗಾಕಾಂಕ್ಷಿಗಳು ಜಮಾಯಿಸಿದ್ದರಿಂದ ಭಾರಿ ನೂಕು ನುಗ್ಗಲಾಗಿದೆ.
ಕೇವಲ 10 ಹುದ್ದೆಗಳಿಗೆ 1800 ಯುವಕರು ಅರ್ಜಿ ಸಲ್ಲಿಕೆ ಮಾಡಿದ್ದು, ಸಂದರ್ಶನದ ವೇಳೆ ನೂಕು ನುಗ್ಗಲು-ಕಾಲ್ತುಳಿತ ಉಂಟಾಗಿದೆ. ಪರಿಣಾಮ ರೇಲಿಂಗ್ ಕೂಡ ಕುಸಿತಿದ್ದು, ಇದು ವ್ಯಾಪಕ ಕಳವಳವನ್ನು ಹುಟ್ಟುಹಾಕಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿಲ್ಲ. ಇದು ನಮ್ಮ ದೇಶದಲ್ಲಿರುವ ನಿರುದ್ಯೋಗದ ಸಮಸ್ಯೆಗೆ ಜ್ವಲಂತ ಸಾಕ್ಷಿ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.
10 ಸ್ಥಾನಗಳಿಗೆ 1,800 ಉದ್ಯೋಗಾಕಾಂಕ್ಷಿಗಳು ಹಾಜರಾಗಿದ್ದರಿಂದ ಅಂಕಲೇಶ್ವರದಲ್ಲಿ ಈ ಘಟನೆ ನಡೆದಿದೆ. ವೈರಲ್ ವೀಡಿಯೊಗೆ ಪ್ರತಿಕ್ರಿಯಿಸಿದ ಗುಜರಾತ್ ಗೃಹ ಸಚಿವ ಹರ್ಷ್ ಸಾಂಘವಿ, ರಾಜ್ಯವನ್ನು ದೂಷಿಸಲು ಈ ವಿಡಿಯೋ ತುಣುಕನ್ನು ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ.