ಉತ್ತರ ಅಮೆರಿಕದ ಕಾಡುಗಳಲ್ಲಿ ವಿಶೇಷವಾಗಿ ಪೆಸಿಫಿಕ್ ವಾಯುವ್ಯದಲ್ಲಿ ಸಂಚರಿಸುತ್ತವೆ ಎಂದು ನಂಬಲಾದ ಪೌರಾಣಿಕ ಜೀವಿ ಬಿಗ್ ಫೂಟ್ ಅಸ್ವಿತ್ವದ ಬಗ್ಗೆ ಹಲವು ಪ್ರಶ್ನೆ ಮತ್ತು ಕುತೂಹಲಗಳಿವೆ. ಅದರ ಅಸ್ತಿತ್ವದ ಪುರಾವೆಗಾಗಿ ಹುಡುಕಾಟ ನಡೆಯುತ್ತಿರುವ ನಡುವೆಯೇ ಡ್ರೋಣ್ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿರುವ ಆಕೃತಿ ಗಮನ ಸೆಳೆದಿದೆ.
ಸಾಸ್ಕ್ವಾಚ್ ಎಂದೂ ಕರೆಸಿಕೊಳ್ಳುವ ಈ ಬಿಗ್ ಫೂಟ್ ನ ಪೌರಾಣಿಕವೆಂದು ಪರಿಗಣಿಸಲಾಗಿದ್ದರೂ ಕೆಲವರು ಇದು ನಿಜವಾಗಿಯೂ ಜೀವಿಯೆಂದು ನಂಬುತ್ತಾರೆ. ಬಿಗ್ ಫೂಟ್ ಅನ್ನು ನೋಡಿರುವುದಾಗಿಯೂ ಆಗೊಮ್ಮೆ ಈಗೊಮ್ಮೆ ಕೆಲವರು ಹೇಳುತ್ತಿರುತ್ತಾರೆ. ಇಂತಹ ಮಾತುಗಳು ಬಿಗ್ ಫೂಟ್ ಬಗ್ಗೆ ಇರುವ ಆಸಕ್ತಿಯನ್ನು ಹೆಚ್ಚಿಸುತ್ತಿರುತ್ತವೆ. ಇಂತಹ ಆಸಕ್ತಿ ವಿಚಾರದ ನಡುವೆ ದಿ ಪ್ಯಾರಾನಾರ್ಮಲ್ ಚಿಕ್ ಎಂಬ ಹೆಸರಿನ ಟಿಕ್‌ಟಾಕ್ ಬಳಕೆದಾರರು ಬಿಗ್ ಫೂಟ್ ಡ್ರೋಣ್ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿರುವುದಾಗಿ ಹೇಳಿದ್ದು ಈ ಬಗೆಗಿನ ಆಸಕ್ತಿಯನ್ನು ಇನ್ನೂ ಹೆಚ್ಚು ಮಾಡಿದೆ.
ಮೂಲತಃ ಯೂಟ್ಯೂಬ್‌ನಲ್ಲಿ ಕೆನ್ಸ್ ಕಾರ್ಪೆಂಟ್ರಿ ಎಂಬ ವ್ಯಕ್ತಿ ಯೂಟ್ಯೂಬ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರೂ, ನಂತರ ಟಿಕ್‌ಟಾಕ್‌ನಲ್ಲಿ ದಿ ಪ್ಯಾರಾನಾರ್ಮಲ್ ಚಿಕ್ ಅದನ್ನು ಮತ್ತೆ ಅಪ್‌ಲೋಡ್ ಮಾಡಿದ್ದಾರೆ. ಟಿಕ್‌ಟಾಕ್ ನ ಶೀರ್ಷಿಕೆಯಲ್ಲಿ ‘ಬಿಗ್‌ಫೂಟ್ ಈಸ್ ರಿಯಲ್’ ಎಂದು ಬರೆದಿದ್ದಾರೆ.
ಕೆನ್ಸ್ ಕಾರ್ಪೆಂಟ್ರಿ ಅವರ ಡ್ರೋಣ್ ದೃಶ್ಯದಿಂದ ತಾನು ಪ್ರಭಾವಿತಳಾಗಿರುವುದಾಗಿ ಟಿಕ್ ಟಾಕ್ ಸ್ಟಾರ್ ಹೇಳಿದ್ದಾರೆ. ಅವರ ಪ್ರಕಾರ ಕ್ಯಾಮರಾದಲ್ಲಿ ಬಿಗ್‌ಫೂಟ್ ಕಾಣಿಸಿಕೊಂಡ ಅತ್ಯುತ್ತಮ ರೆಕಾರ್ಡಿಂಗ್ ಇದಾಗಿದೆ. ಆದರೆ ಕಳೆದ ವರ್ಷ ತಾಯಿ ಕರಡಿ ಮತ್ತು ಅದರ ಮರಿಗಳನ್ನು ಹುಡುಕುತ್ತಿರುವಾಗ ಕೆನ್ಸ್ ಕಾರ್ಪೆಂಟ್ರಿ ಈ ಅಪರಿಚಿತ ಪ್ರಾಣಿಯನ್ನು ಕಂಡಿದ್ದಾಗಿ ಯೂಟ್ಯೂಬ್ ನಲ್ಲಿ ಹೇಳಿದ್ದಾರೆ. ಪ್ರಶ್ನಾತೀತ ಬಿಗ್ ಫೂಟ್ ಕಾಡಿನ ಮೂಲಕ ನಡೆಯುವ ಎತ್ತರದ, ಕೂದಲುಳ್ಳ ಆಕೃತಿಯ ಜೀವಿಯಂತೆ ಕಾಣುತ್ತಿದೆ.