
ಈಜಿಪ್ಟ್ ನಲ್ಲಿ ಭಯಾನಕ ಶಾರ್ಕ್ ಮೀನು ರಷ್ಯಾ ಮೂಲದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರ ಎದುರಲ್ಲೇ ಬಲಿ ಪಡೆದಿದೆ. ಹುರ್ಗಾಡಾ ನಗರದ ಬಳಿ ಕೆಂಪು ಸಮುದ್ರದಲ್ಲಿ ನಡೆದಿರೋ ಆಘಾತಕಾರಿ ಘಟನೆ ಇದಾಗಿದೆ. ವ್ಯಕ್ತಿಯನ್ನು ನರಭಕ್ಷಕ ಶಾರ್ಕ್, ಜೀವಂತವಾಗಿ ನುಂಗಿದೆ. ಈ ಮೀನನ್ನು ಸಾರ್ವಜನಿಕರು ಸೆರೆಹಿಡಿದಿದ್ದಾರೆ.
ಶಾರ್ಕ್ ದಾಳಿಗೆ ಬಲಿಯಾಗಿರುವ ವ್ಯಕ್ತಿಯನ್ನು ವ್ಲಾಡಿಮಿರ್ ಪೊಪೊವ್ ಎಂದು ಗುರುತಿಸಲಾಗಿದೆ. ಶಾರ್ಕ್ ಮೀನು ಸಜೀವವಾಗಿ ಮಗನನ್ನು ನುಂಗಿ ಹಾಕ್ತಿರೋ ಭಯಾನಕ ದೃಶ್ಯವನ್ನು ಆತನ ತಂದೆ ಕೂಡ ನೋಡಿದ್ದಾರೆ. ಘಟನೆ ನಡೆದಾಗ ತಂದೆಯೂ ಸ್ಥಳದಲ್ಲೇ ಇದ್ದರು.
ಶಾರ್ಕ್ ವ್ಯಕ್ತಿಯ ಮೇಲೆ ದಾಳಿ ಮಾಡಿ ಆತನನ್ನು ಜೀವಂತ ನುಂಗಿ ಹಾಕಿರೋ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗ್ಲೇ ವೈರಲ್ ಆಗಿದೆ. ಸ್ಥಳೀಯರು ಶಾರ್ಕ್ ಮೀನೊಂದನ್ನು ಸೆರೆಹಿಡಿದಿದ್ದಾರೆ, ಆದ್ರೆ ಸೆರೆಸಿಕ್ಕಿರುವ ಮೀನು ನರಭಕ್ಷಕ ಎಂಬುದಕ್ಕೆ ಸಾಕ್ಷ್ಯವೇನು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಸ್ಥಳೀಯರು ಬೇರೆ ಮೀನನ್ನು ಸೆರೆಹಿಡಿದಿರುವ ಸಾಧ್ಯತೆಯೂ ಇದೆ ಎಂಬ ಕಮೆಂಟ್‌ಗಳು ಹರಿದಾಡುತ್ತಿವೆ.
https://twitter.com/KrzysztofJano15/status/1666821519031570439?ref_src=twsrc%5Etfw%7Ctwcamp%5Etweetembed%7Ctwterm%5E1666821519031570439%7Ctwgr%5E92eebe48dd1d618d423e5a55c1d578fd9257de84%7Ctwcon%5Es1_&ref_url=https%3A%2F%2Fwww.latestly.com%2Fsocially%2Fworld%2Fshark-attack-in-egypt-video-russian-man-eaten-alive-by-tiger-shark-in-red-sea-as-father-watches-in-horror-spine-chilling-footage-surfaces-5188225.html