alex Certify WATCH: ಅಪರೂಪದ ನೀಲಿ ಚೇಳೆಡಿ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WATCH: ಅಪರೂಪದ ನೀಲಿ ಚೇಳೆಡಿ ಪತ್ತೆ

ಸಮುದ್ರ ಅಂತಾ ಸುಮ್ನೆ ಹೇಳಲ್ಲ. ಅದರಡಿಯಲ್ಲಿ ಊಹೆಗೂ ನಿಲುಕದಷ್ಟು ಕೂತೂಹಲಕಾರಿ, ಅಚ್ಚರಿ ಅಂಶಗಳು, ಕೊಟ್ಯಂತರ ಜೀವಿಗಳು ಇವೆ. ಆ ಕೋಟ್ಯಂತರ ಜೀವಿಗಳಲ್ಲಿ ಆಗಾಗ ಕೆಲ ಅಪರೂಪದ ಹೊರ ಜಗತ್ತಿನ ಮುಂದೆ ಬರುತ್ತಲೇ ಇರುತ್ತೆ. ಈಗ ಮತ್ತೆ ಅಂತಹದ್ದೇ ಜೀವಿಗಳಲ್ಲಿ ಒಂದಾದ ನೀಲಿ ಬಣ್ಣದ ಚೇಳೇಡಿ (lobster) ಯೊಂದು ಯುಎಸ್‌ನ ಮೀನುಗಾರನ ಕೈಗೆ ಸಿಕ್ಕಿದೆ.

ಐಲೆಂಡ್‌ನ ಬ್ಲೇಕ್‌ ಹಾಸ್‌ ಮೌಂಟ್‌ ಡೆಸರ್ಟ್‌ನಲ್ಲಿ ಈ ಅಪರೂಪದ ನೀಲಿ ಬಣ್ಣದ ಕಡಲ ಚೇಳೇಡಿ ಸಿಕ್ಕಿರುವ ವಿಡಿಯೋ ಕ್ಲಿಪ್‌ನ್ನ ಯುಎಸ್‌ನ ಈ ಮೀನುಗಾರ ಶೇರ್ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಸಮುದ್ರದ ಏಡಿಗಳು ಅನೇಕ ಬಣ್ಣದಲ್ಲಿರುವುದನ್ನು ನಾವು ನೋಡಿರುತ್ತೇವೆ. ಬಿಳಿ, ಕಪ್ಪು, ಕೆಂಪು, ಕಂದು ಹೀಗೆ ಹಲವಾರು ಬಣ್ಣದಲ್ಲಿ ಇರುವುದನ್ನ ನೋಡಿರುತ್ತೇವೆ. ಆದರೆ ಇದು ನೀಲಿ ಬಣ್ಣದ ಕಡಲಚೇಳೇಡಿಯಾಗಿದೆ. ಇದನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿರುವ ಮೈನೆ ಇವರು ಈ ವಿಡಿಯೋಗೆ ‘2,000,000 ರಲ್ಲಿ 1’ ಅಂತ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಹೆಚ್ಚಿನ ಲಾಬ್‍ಸ್ಟರ್ ಗಳು ಕೆಸರುಮಯವಾದ ಕಂದು ಅಥವಾ ಮಂದ ಕೆಂಪು ಬಣ್ಣವನ್ನು ಹೊಂದಿರುತ್ತವೆ ಆದರೆ, ಮೈನೆ ವಿಶ್ವವಿದ್ಯಾನಿಲಯದ ಲಾಬ್‍ಸ್ಟರ್ ಇನ್‌ಸ್ಟಿಟ್ಯೂಟ್ ಪ್ರಕಾರ, ನೀಲಿ ಲಾಬ್‍ಸ್ಟರ್ ಬಹಳ ವಿರಳವಾಗಿದೆ ಎಂದಿದೆ. ಈ ನೀಲಿ ಲಾಬ್‍ಸ್ಟರ್ ಗಳು ಎರಡು ಮಿಲಿಯನ್‌ಗೆ ಒಂದು ಕಂಡುಬರುತ್ತವೆ ಎಂದು ಹೇಳಿದೆ.

ಆನುವಂಶಿಕ ದೋಷದಿಂದಾಗಿ ನೀಲಿ ಲಾಬ್‍ಸ್ಟರ್ ಗಳು ಅಪರೂಪದ ಬಣ್ಣವನ್ನು ಪಡೆಯುತ್ತವೆ. ಈ ನೀಲಿ ಕಡಲೇಡಿ ಅದು ಇತರರಿಗಿಂತ ಹೆಚ್ಚು ನಿರ್ದಿಷ್ಟ ಪ್ರೋಟೀನ್ ಅನ್ನು ಉತ್ಪಾದಿಸಲು ಕಾರಣವಾಗುತ್ತದೆ ಎಂದು ಹೇಳಲಾಗಿದೆ.

ನೀಲಿ ಲಾಬ್‍ಸ್ಟರ್ ಗಳು ಬಹಳ ವಿರಳವಾಗಿರುವುದರಿಂದ, ಇವುಗಳು ಲಭಿಸಿದ ನಂತರ ಮೀನುಗಾರರ ಅವುಗಳನ್ನು ಮತ್ತೆ ಸಮುದ್ರಕ್ಕೆ ಬಿಡುತ್ತಾರೆ. ಹೀಗೆ ಮಾಡುವುದರಿಂದ ಅಪರೂಪದಲ್ಲಿಯೇ ಅಪರೂಪ ಎನ್ನಲಾಗುವ ನೀಲಿ ಲಾಬ್‍ಸ್ಟರ್ ಸೇರಿ ಇಂತಹ ಹಲವು ಜೀವಿಗಳ ಸಂಖ್ಯೆಯು ಹೆಚ್ಚುತ್ತದೆ ಮತ್ತು ಪ್ರಬೇಧಗಳು ಅಳಿವಿನಂಚಿಗೆ ಒಳಗಾಗುವುದಿಲ್ಲ ಎನ್ನಲಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...