2004 ರ ಇಂಡೋನೇಷಿಯಾದ ಸುಮಾತ್ರ ದ್ವೀಪದಲ್ಲಿ ಕಾಣಿಸಿಕೊಂಡಿದ್ದ ಸುನಾಮಿ ಎಂಬ ಮಹಾ ಅಲೆ ರುದ್ರಾವತಾರ ತಾಳಿ, ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು.
ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲೂ ಈ ದೈತ್ಯ ಅಲೆಗಳು ನುಗ್ಗಿ ಬಂದು ಅದೆಷ್ಟೋ ಜನರ ಸರ್ವಸ್ವವನ್ನ ಕೊಚ್ಚಿಕೊಂಡು ಹೋಗಿತ್ತು. ಈಗ ಅದೇ ಸುನಾಮಿ ಅಲೆಗಳನ್ನ ನೆನಪಿಸುವಂತ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಗಮನಿಸುವ ಹಾಗೆ ರಸ್ತೆ ಮೇಲೆ ದ್ವಿಚಕ್ರವಾಹನವೊಂದು ಹೋಗುತ್ತಿರುತ್ತೆ. ಅದೇ ಸಮಯದಲ್ಲಿ ಭೂಮಿಯು ಒಮ್ಮಿಂದೊಮ್ಮೆ ಬಾಯ್ಬಿಟ್ಟು ಸುನಾಮಿ ರೂಪದ ಅಲೆಯನ್ನ ಹೊರಗೆ ಹಾಕಿದಂತಿದೆ.
ಈ ವಿಡಿಯೋ ನೋಡಿದವರೆಲ್ಲರೂ ಶಾಕ್ ಆಗಿದ್ದಾರೆ. ಈ ಘಟನೆಯಲ್ಲಿ ನೀರು ಚಿಮ್ಮಿದ ರಭಸಕ್ಕೆ , ದ್ವಿಚಕ್ರವಾಹನ ಓಡಿಸುತ್ತಿದ್ದ ಮಹಿಳೆ ಕೆಲ ಅಡಿಗಳಷ್ಟು ದೂರ ಹೋಗಿ ಬಿದ್ದಿದ್ದಾರೆ. ಅವರಿಗೆ ಗಂಭೀರ ರೂಪದ ಗಾಯಗಳಾಗಿವೆ. ಸ್ಥಳೀಯರು ಅವರನ್ನ ತಕ್ಷಣವೇ ಆಸ್ಪತ್ರೆಗೆ ಸೇರಿಸಿದ್ದಾರೆ.
ಅಸಲಿಗೆ ವೈರಲ್ ಆಗಿರುವ ಈ ವಿಡಿಯೋ ಮಾರ್ಚ್ 3, 2023ನದ್ದಾಗಿದೆ. ಮಹಾರಾಷ್ಟ್ರದ ಯವತ್ಮಾಲ್ ವಿದರ್ಭ ಹೌಸಿಂಗ್ ಸೊಸೈಟಿ ಬಳಿ, ನಡೆದಿದ್ದು, ಭೂಮಿಯೊಳಗೆ ಅಳವಡಿಸಿರುವ ನೀರಿನ ಪೈಪ್ ಒಡೆದು ಹೋಗಿದ್ದರಿಂದ, ಭೂಮಿಯ ಮೇಲ್ಪದರು ಕುಸಿದು ನೀರು ಒಮ್ಮಿಂದೊಮ್ಮೆಲೆ ಹೊರಗೆ ಚಿಮ್ಮಿದೆ. ಈ ವಿಡಿಯೋ ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿಯಾಗಿದೆ. ಈ ಘಟನೆಯು ಅಲ್ಲೇ ಇದ್ದ ಸಿಸಿ ಟಿವಿಯಲ್ಲಿ ಇಂಚಿಂಚು ಸೆರೆಯಾಗಿದೆ.
ಈ ವಿಡಿಯೋ ಈಗ ವೈರಲ್ ಆಗಿದ್ದು. ನೆಟ್ಟಿಗರು ಈ ವಿಡಿಯೋ ನೋಡಿ ಶಾಕ್ ಆಗಿದ್ದಾರೆ ಅಷ್ಟೆ ಅಲ್ಲ ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅದೃಷ್ಟವಶಾತ್ ಅಲ್ಲಿ ಜನರಿದ್ದರೆ, ವಾಹನಗಳು ಓಡಾಡ್ತಿದ್ದರೆ, ಆಲ್ಲಿ ದೊಡ್ಡ ಅವಾಂತರವೇ ಆಗಿ ಹೋಗಿರುತ್ತಿತ್ತು. ಅದೃಷ್ಟವಶಾತ್ ಅಲ್ಲಿ ಯಾರೂ ಇರಲಿಲ್ಲ. ಇದೆಲ್ಲ ಕಣ್ಮುಂದೆ ನಡೆದಿದ್ದರೂ ಸರ್ಕರ ಮಾತ್ರ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಅನ್ನುವ ಹಾಗೆ ಕುತಿದೆ ಅನ್ನೊದೇ ವಿಪರ್ಯಾಸ.