ಉಕ್ರೇನ್: ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗಿ ಸುಮಾರು 8 ತಿಂಗಳುಗಳು ಕಳೆದಿವೆ. ಆದರೆ ಯುದ್ಧ ಮಾತ್ರ ನಿಲ್ಲುವಂತೆ ಕಾಣಿಸುತ್ತಿಲ್ಲ. ರಷ್ಯಾದ ಈ ಆಕ್ರಣಕ್ಕೆ ವಿವಿಧ ದೇಶಗಳು ವಿರೋಧ ವ್ಯಕ್ತಪಡಿಸಿದರೂ, ಹಲವು ರೀತಿಯ ನಿರ್ಬಂಧಗಳು ಮತ್ತು ನಿಷೇಧಗಳನ್ನು ಹೇರುತ್ತಿದ್ದರೂ ಯುದ್ಧವು ಇನ್ನೂ ಮುಂದುವರೆದಿದೆ.
ಕಳೆದ ಎರಡು ದಿನಗಳಲ್ಲಿ ಉಕ್ರೇನ್ ಮೇಲೆ 30 ಕ್ಕೂ ಹೆಚ್ಚು ಡ್ರೋನ್ ದಾಳಿಗಳನ್ನು ನಡೆಸಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬಹಿರಂಗಪಡಿಸಿದ್ದಾರೆ. ಯುದ್ಧ ಪೀಡಿತ ದೇಶದ ಹಲವು ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ.
ಇವುಗಳಲ್ಲಿ ಒಂದು ಇದೀಗ ಗಮನ ಸೆಳೆದಿದೆ. ಉಕ್ರೇನಿಯನ್ ಮಿಲಿಟರಿ ಹೆಲಿಕಾಪ್ಟರ್‌ಗಳು ರಷ್ಯಾದ ಕಣ್ಣಿನಿಂದ ಹೇಗೆ ತಪ್ಪಿಸಿಕೊಳ್ಳುತ್ತಿವೆ ಎಂಬುದನ್ನು ಈ ವೈರಲ್ ವೀಡಿಯೊ ತೋರಿಸುತ್ತಿದೆ. ರಕ್ಷಣಾ ಸಚಿವಾಲಯದ ಅಧಿಕೃತ ವೆಬ್ಸೈಟ್ ಈ ವಿಡಿಯೋ ಶೇರ್ ಮಾಡಿದೆ. ಈ ವಿಡಿಯೋದಲ್ಲಿ ಹೆಲಿಕಾಪ್ಟರ್ ನೆಲದಿಂದ ಕೇವಲ 5 ಮೀಟರ್ ಎತ್ತರದಲ್ಲಿ ಹಾರುತ್ತಿರುವುದನ್ನು ಕಾಣಬಹುದು. ಇದು ಶತ್ರು ರಾಡಾರ್‌ಗಳಿಂದ ಪತ್ತೆಹಚ್ಚುವುದನ್ನು ತಪ್ಪಿಸಲು ಉಕ್ರೇನಿಯನ್ ರಕ್ಷಣಾ ಪಡೆಗಳು ಬಳಸುವ ತಂತ್ರವಾಗಿದೆ ಎಂದು ಹೇಳಲಾಗುತ್ತಿದೆ.
“ನಮ್ಮ ಹೆಲಿಕಾಪ್ಟರ್‌ನ ಹಿಂದಿನ ದೃಶ್ಯವನ್ನು ನೋಡಲು ಸಾಧ್ಯವಾಗದ ಜನರಿಗಾಗಿ ಈ ವಿಡಿಯೋ” ಎಂದು ಶೀರ್ಷಿಕೆ ನೀಡಲಾಗಿದೆ. 5 ಮೀಟರ್‌ಗಳ ಹಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಶತ್ರುಗಳ ವಿಮಾನವು ರಕ್ಷಣೆಗಾಗಿ ನಮ್ಮ “ಡ್ರಾಗನ್‌ಫ್ಲೈಸ್” ಅನ್ನು ಹೊಡೆದುರುಳಿಸಲು ಸಾಧ್ಯವಾಗುತ್ತಿಲ್ಲ, ಇದು ನಮ್ಮ ಹೆಮ್ಮೆ ಎಂದು ಟ್ವಿಟರ್ನಲ್ಲಿ ತಿಳಿಸಲಾಗಿದೆ.