ದೆಹಲಿ ಮೆಟ್ರೋ, ರಾಜಧಾನಿಯ ಜೀವನಾಡಿಯಾಗಿದ್ದು, ಪ್ರತಿ ದಿನ ಸಾಗುವ ಪ್ರಯಾಣಿಕರ ನಡುವಿನ ಒಂದಷ್ಟು ಬೆಳವಣಿಗೆ ರೋಚಕವಾದದ್ದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಮೆಟ್ರೋದಲ್ಲಿ ಆಸನದ ವ್ಯವಸ್ಥೆಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಪರಸ್ಪರ ಕಿತ್ತಾಡಿಕೊಳ್ಳುತ್ತಿರುವುದನ್ನು ತೋರಿಸುತ್ತದೆ.
ಒಬ್ಬರು ಆರಾಮವಾಗಿ ಆಸನದ ಮೇಲೆ ಕುಳಿತಿದ್ದರೆ, ಇನ್ನೊಬ್ಬರು ತನಗಾಗಿ ಒಂದು ಸ್ಥಳ ಹುಡುಕಲು ಹೆಣಗಾಡುತ್ತಿರುವುದನ್ನು ಕಾಣಬಹುದು ಮತ್ತು ಈ ಸಮಯದಲ್ಲಿ ನಾಟಕೀಯ ಬೆಳವಣಿಗೆ ಪ್ರಾರಂಭವಾಗುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ನಂತರ ವಿಡಿಯೊ ವೈರಲ್ ಆಗಿದೆ. ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಕೆಲವರು ರಂಜನೀಯ ಕಾಮೆಂಟ್ ಮಾಡಿದ್ದಾರೆ. ಎರಡು ಚೀಲಗಳು ತುಂಬಾ ಜಾಗವನ್ನು ಆಕ್ರಮಿಸಿಕೊಂಡಿವೆ, ನಿಂತಿರುವ ಮಹಿಳೆಗೆ ಇಲ್ಲಿ ಜಾಗವನ್ನು ನೀಡಬಹುದಿತ್ತು ಎಂದು ಟ್ವಿಟರ್ ಬಳಕೆದಾರರು ಸಲಹೆ ನೀಡಿದ್ದಾರೆ.
ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ಮೆಟ್ರೋದಲ್ಲಿ ಹುಡುಗ – ಹುಡುಗಿ ಭಾರೀ ಜಗಳವಾಡುತ್ತಿರುವುದು ಕಂಡುಬಂದಿದೆ. ಹುಡುಗಿ ಹುಡುಗನಿಗೆ ಕಪಾಳಮೋಕ್ಷ ಮಾಡಿದ್ದಕ್ಕೆ ಅಲ್ಲಿದ್ದವರೆಲ್ಲ ಸಾಕ್ಷಿಯಾದರು. ಟಿ ಶರ್ಟ್ ಬೆಲೆ ವಿಚಾರಕ್ಕೆ ಅವರಿಬ್ಬರ ನಡುವೆ ಜಗಳ ನಡೆದಿದ್ದು, 1000 ರೂ. ಕೊಟ್ಟು ಶರ್ಟ್ ತಂದಿದ್ದಾಗಿ ಹುಡುಗ ಹೇಳಿದರೆ, ಆಕೆ ಒಪ್ಪಲಿಲ್ಲ. ಅದು 150 ರೂ.ಗಿಂತ ಹೆಚ್ಚಿಲ್ಲ ಎಂದು ಹೇಳಿ ಸಿಟ್ಟಿನಿಂದ ಹುಡುಗನಿಗೆ ಹೊಡೆದಿದ್ದಾಳೆ. ಹುಡುಗ ಆಕೆಯನ್ನು ಎಚ್ಚರಿಸಿ ಇದು ಸಾರ್ವಜನಿಕ ಸ್ಥಳವಾಗಿದೆ ಎಂದು ನೆನಪಿಸಿದರೂ ಹುಡುಗಿ ಆಕ್ರೋಶ ತಣ್ಣಗಾಗದೇ ಇದ್ದಾಗ ಹುಡುಗನು ಹುಡುಗಿಗೆ ಕಪಾಳಮೋಕ್ಷ ಮಾಡಿದ್ದಾನೆ.