ಉತ್ತರ ಭಾರತದಾದ್ಯಂತ ಈಗ ಅತ್ಯಂತ ಶೀತ ವಾತಾವರಣವಿದೆ. ಜಮ್ಮು ಕಾಶ್ಮೀರದಲ್ಲಿ ಹಿಮ ಸುರಿಯುತ್ತಿದ್ದು, ಇದರ ನಡುವೆ ಭಾರತೀಯ ರೈಲ್ವೆ, ಹಿಮದ ನಡುವೆ ಸಂಚರಿಸುತ್ತಿರುವ ರೈಲಿನ ನಯನ ಮನೋಹರ ದೃಶ್ಯದ ವಿಡಿಯೋವನ್ನು ಹಂಚಿಕೊಂಡಿದ್ದು, ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾಶ್ಮೀರ ಕಣಿವೆಯ ಬನಿಹಾಲ್ ನಿಂದ ಬದ್ಗಾಂವ್ ಗೆ ಈ ರೈಲು ಸಂಚರಿಸುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಉದಂಪುರ್ ಶ್ರೀನಗರ್ ಬಾರಾಮುಲ್ಲಾ ರಾಷ್ಟ್ರೀಯ ಯೋಜನೆಯಡಿ ಭಾರತೀಯ ರೈಲ್ವೆ ಇಲ್ಲಿ ಬ್ರಾಡ್ ಗೇಜ್ ಆರಂಭಿಸಿದೆ.
ಜಮ್ಮು ಕಾಶ್ಮೀರವನ್ನು ದೇಶದ ಇತರೆ ಭಾಗಗಳಿಗೆ ಜೋಡಣೆ ಮಾಡುವ ಸಲುವಾಗಿ ರೈಲ್ವೆ ಕಾಮಗಾರಿಗಳನ್ನು ಆರಂಭಿಸಲಾಗಿದ್ದು, ಇದರಿಂದಾಗಿ ಸ್ಥಳೀಯರಿಗೆ ಉದ್ಯೋಗಾವಕಾಶವೂ ಹೆಚ್ಚಿದೆ. ರೈಲು ಸಂಪರ್ಕ ಕಾರಣದಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದೆಂಬ ನಿರೀಕ್ಷೆಯೂ ಇದೆ.