
ಮಾನವೀಯತೆ ಪ್ರದರ್ಶಿಸಿದ ಸಂಚಾರಿ ಠಾಣೆ ಪೊಲೀಸ್ ಅಧಿಕಾರಿಯನ್ನು ಎಸ್. ನಾಗರಾಜ್ ಎಂದು ಗುರುತಿಸಲಾಗಿದೆ. ಜನನಿಬಿಡ ರಸ್ತೆಯನ್ನು ದಾಟುತ್ತಿದ್ದ ವಿಕಲಚೇತನ ವ್ಯಕ್ತಿಯೊಂದಿಗೆ ತಾನೂ ಸಂಚರಿಸುವ ಮೂಲಕ ಪಕ್ಕದ ರಸ್ತೆಗೆ ದಾಟಿಸಿದ್ದಾರೆ. ಈ ವಿಡಿಯೋವನ್ನು ಕ್ಯಾಮರಾದಲ್ಲಿ ಚಿತ್ರೀಕರಿಸಲಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ.
ಇದು ನನ್ನ ಬೆಂಗಳೂರು ಟ್ರಾಫಿಕ್ ಪೊಲೀಸ್ ಅಂತಾ ಎಕ್ಸ್ನಲ್ಲಿ ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಇದನ್ನು ಬೆಂಗಳೂರು ಸಂಚಾರ ಪೊಲೀಸ್ ಠಾಣೆ ಅಧಿಕಾರಿ ಶ್ರೀರಾಮ್ ಬಿಷ್ಣೋಯ್ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಗುಡ್ ರೆಸ್ಪಾನ್ಸ್ ಸಿಕ್ಕಿದೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆಯೇ ಕೆಜಿ ಹಳ್ಳಿ ಸಂಚಾರಿ ಪೊಲೀಸ್ ಠಾಣೆ ಪ್ರತಿಕ್ರಿಯಿಸಿದೆ. ನಮ್ಮ ಸಿಬ್ಬಂದಿಯ ಉತ್ತಮ ಕೆಲಸವನ್ನು ಗುರುತಿಸಿದ್ದಕ್ಕೆ ಹಾಗೂ ಶ್ಲಾಘಿಸಿದ್ದಕ್ಕೆ ಧನ್ಯವಾದಗಳು ಎಂದು ಬರೆದಿದ್ದಾರೆ . ಅಲ್ಲದೇ ಇಂತಹ ಮೆಚ್ಚುಗೆಗಳು ನಮಗೆ ಇನ್ನಷ್ಟು ಇಂಥಹ ಕೆಲಸಗಳನ್ನು ಮಾಡಲು ಪ್ರೇರಪಿಸುತ್ತದೆ ಎಂದೂ ಸಹ ಟ್ವೀಟ್ನಲ್ಲಿ ತಿಳಿಸಲಾಗಿದೆ.