ನ್ಯಾಷನಲ್ ಪಾರ್ಕ್ ಗೆ ಭೇಟಿ ನೀಡುವ ಕೆಲವು ಪ್ರವಾಸಿಗರು ಅಲ್ಲಿನ ನಿಯಮವನ್ನು ಉಲ್ಲಂಘಿಸಿ ಅಪಾಯಕ್ಕೆ ಸಿಲುಕಿದವರಿದ್ದಾರೆ. ಯುಎಸ್‍ನ ಯೆಲ್ಲೊಸ್ಟೋನ್ ನ್ಯಾಶನಲ್ ಪಾರ್ಕ್‌ನಲ್ಲಿರುವ ಪ್ರವಾಸಿಗರೊಬ್ಬರು, ಇತ್ತೀಚೆಗೆ ಎಲ್ಲಾ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಕಡವೆಗಳ ಹಿಂಡನ್ನು ಹತ್ತಿರದಿಂದ ನೋಡಲು ನಿರ್ಧರಿಸಿದ್ದಾರೆ. ಈ ವೇಳೆ ಆತ ಬದುಕಿದರೆ ಸಾಕು ಎಂಬಂತೆ ಓಡಿದ್ದಾನೆ. ಸದ್ಯ, ಈ ವಿಡಿಯೋ ವೈರಲ್ ಆಗಿದೆ.
ನ್ಯಾಷನಲ್ ಪಾರ್ಕ್ ನ ರಸ್ತೆಯ ಬಳಿ ಕಡವೆಗಳ ಹಿಂಡು ಇರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ಕಡವೆಯೊಂದು ತನ್ನ ಹಿಂಡಿನ ಬಳಿ ನಿಂತ ವಾಹನದತ್ತ ದೃಷ್ಟಿ ಹರಿಸುತ್ತದೆ. ನೋಡ ನೋಡುತ್ತಲೇ ತನ್ನ ಕಾಲುಗಳಿಗೆ ವೇಗವನ್ನು ಕೊಡುತ್ತದೆ. ಆ ಪ್ರವಾಸಿಗನ ಹತ್ತಿರ ಓಡಿದ ದೈತ್ಯ ಬುಲ್ ತುಸು ದೂರದಲ್ಲೇ ತನ್ನ ಕೊಂಬುಗಳಿಂದ ತಿವಿಯುವಂತೆ ಮಾಡುತ್ತದೆ.
ಇನ್ನೇನು ತನ್ನ ಬಳಿ ಸಮೀಪಿಸಿದ ಕಡವೆ ತನಗೆ ತಿವಿದೇ ಬಿಟ್ಟಿತು ಎಂದು ಹೆದರಿದ ಪ್ರವಾಸಿಗ ಹೆದರಿ ಓಡಿದ್ದಾನೆ. ಈ ವೇಳೆ ಎಡವಿ ಬಿದ್ದ ಆತ, ಕಡವೆಯನ್ನು ನೋಡುತ್ತಲೇ ಮತ್ತೆ ದೂರ ಓಡಿದ್ದಾನೆ. ಆತನ ಮೇಲೆ ದಾಳಿ ಮಾಡದ ಕಡವೆ ಸುಮ್ಮನೇ ನೋಡುತ್ತಾ ನಿಂತಿದೆ. ಈ ದೃಶ್ಯವನ್ನು ಅಲ್ಲಿದ್ದ ಪ್ರವಾಸಿಗರು ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೆ, ಯೂಟ್ಯೂಬ್‌ನಲ್ಲಿ 57,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.