ಪ್ರಕೃತಿಯಲ್ಲಿ ಪ್ರಬಲ ಪ್ರಾಣಿಗಳು ದುರ್ಬಲ ವರ್ಗದ ಜೀವಗಳ ಮೇಲೆ ಸವಾರಿ ಮಾಡುವುದು ಸಾಮಾನ್ಯ. ಶಕ್ತಿಶಾಲಿ ಪ್ರಾಣಿಗಳು ದುರ್ಬಲ ಪ್ರಾಣಿಗಳನ್ನ ದಾಳಿ ಮಾಡಿ ತಿನ್ನುವುದನ್ನ ನೋಡಿದ್ದೇವೆ.
ಆದರೆ ನಿಮಗೆ ಅಚ್ಚರಿಯಾಗಬಹುದು, ಮೊಸಳೆಯು ಆಮೆಯನ್ನು ತಿನ್ನಲು ತನ್ನ ಬಾಯಿಗೆ ಹಾಕಿಕೊಂಡರೂ ಅದು ಸಾಧ್ಯವಾಗಿಲ್ಲ.
ಒಂದು ದೊಡ್ಡ ಮೊಸಳೆಯು ಆಮೆಯನ್ನು ತನ್ನ ಬಾಯಿಯಲ್ಲಿ ತೆಗೆದುಕೊಂಡು ಅದರ ಶಕ್ತಿಯುತ ದವಡೆಗಳಲ್ಲಿ ನುಜ್ಜುಗುಜ್ಜು ಮಾಡಲು ಪ್ರಯತ್ನಿಸುತ್ತದೆ.
ಆದರೆ ಅದನ್ನು ಮಾಡಲು ಸಾಧ್ಯವಾಗುವುದಿಲ್ಲ. ಸಾವಿನ ದವಡೆಯಿಂದ ಪಾರಾಗಲು ಆಮೆ, ಮೊಸಳೆ ಬಾಯಿಂದ ತಪ್ಪಿಸಿಕೊಂಡು ಹೊರಗೆ ಬರುತ್ತದೆ. ಈ ವಿಡಿಯೋ ವೈರಲ್ ಆಗಿದೆ.