alex Certify WATCH: ಲ್ಯಾಪ್​ಟಾಪ್​ನಲ್ಲಿ ʼಜಂಕ್ʼ​ ಇದೆಯೆಂದು ಸೋಪು ನೀರಲ್ಲಿ ಉಜ್ಜಿ ತೊಳೆದ ಪುಟ್ಟ ಮಗು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WATCH: ಲ್ಯಾಪ್​ಟಾಪ್​ನಲ್ಲಿ ʼಜಂಕ್ʼ​ ಇದೆಯೆಂದು ಸೋಪು ನೀರಲ್ಲಿ ಉಜ್ಜಿ ತೊಳೆದ ಪುಟ್ಟ ಮಗು…..!

ಸೋಪು ನೀರು ತುಂಬಿದ ಬಕೆಟ್​ ನಲ್ಲಿ ಅಪ್ಪನ ಲ್ಯಾಪ್​ಟಾಪ್​ ಅನ್ನು ಮುಳುಗಿಸಿ ಅದನ್ನು ಸ್ವಚ್ಛಗೊಳಿಸಿದ್ದಾಳೆ ಪುಟ್ಟ ಬಾಲೆ !

ಅಷ್ಟಕ್ಕೂ ಈಕೆ ಹೀಗೆ ಮಾಡಿರುವುದಕ್ಕೆ ಕಾರಣ, ಅಪ್ಪ ಪದೇ ಪದೇ ತನ್ನ ಪತ್ನಿಯ ಬಳಿ ಲ್ಯಾಪ್​ಟಾಪ್​ನಲ್ಲಿ ಬಹಳ ಜಂಕ್​ ತುಂಬಿಬಿಟ್ಟಿದೆ ಎಂದು ಹೇಳಿದ್ದು ! ಇದನ್ನು ಕೇಳಿಸಿಕೊಂಡ ಮಗಳು, ಇದಕ್ಕೆ ಅಪ್ಪ ಇಷ್ಟೆಲ್ಲಾ ತಲೆಬಿಸಿ ಮಾಡಿಕೊಳ್ಳುವುದು ಏಕೆ ಎಂದು ಅದನ್ನು ತೊಳೆದಿದ್ದಾಳೆ.

ಇದರ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ನಕ್ಕೂ ನಕ್ಕೂ ಸುಸ್ತಾಗುತ್ತಿದ್ದಾರೆ. ಆದರೆ ದುಬಾರಿ ಲ್ಯಾಪ್​ಟಾಪ್​ ರಿಪೇರಿಗೆ ಕೊಡುವ ತಲೆಬಿಸಿಯಲ್ಲಿದ್ದಾನೆ ಅಪ್ಪ !

ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್‌ ಇದನ್ನು ವರದಿ ಮಾಡಿದೆ. ವರದಿಯ ಪ್ರಕಾರ ಬಾತ್​ರೂಮಿಗೆ ಲ್ಯಾಪ್​ಟಾಪ್​ ತೆಗೆದುಕೊಂಡು ಹೋಗಿ ಸೋಪಿನ ನೀರು ತುಂಬಿದ ಬಕೆಟ್​ನಲ್ಲಿ ಅದ್ದಿ ಅದ್ದಿ ಪೂರ್ತಿ ಸ್ವಚ್ಛಗೊಳಿಸಿದೆ ಈ ಮಗು.

ಅಪ್ಪ-ಅಮ್ಮ ಗದರಿದಾಗ ಅಪ್ಪ ಹೇಳುತ್ತಿದ್ದ ವಿಷಯ ತಿಳಿಸಿ ತಾನು ಅಪ್ಪನಿಗೆ ಸಹಾಯ ಮಾಡಲು ಹೀಗೆ ಮಾಡಿದೆ ಎಂದಿದ್ದಾಳೆ. ಇದನ್ನು ಕೇಳಿದ ಅಪ್ಪ-ಅಮ್ಮನಿಗೆ ನಗಬೇಕೋ, ಅಳಬೇಕೋ ತಿಳಿಯದಾಗಿದೆ !

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...