ಜಪಾನ್: ಜಪಾನ್‌ನ ಹೊನ್ಶು ಎಂಬಲ್ಲಿ ವಿಚಿತ್ರವೊಂದು ಸಂಭವಿಸಿದೆ. ಇಲ್ಲಿ ಸಾವಿರಾರು ಕಾಗೆಗಳು ಏಕಾಏಕಿ ಒಂದೆಡೆ ಸೇರಿದ್ದು, ವಿಚಿತ್ರವಾಗಿ ಕೂಗತೊಡಗಿರುವ ಘಟನೆ ನಡೆದಿದೆ. ಕ್ಯೋಟೋ ಬಳಿಯ ಜಪಾನಿನ ದ್ವೀಪದ ಬೀದಿಗಳಲ್ಲಿ ಈ ಘಟನೆ ಸಂಭವಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗಿದೆ. ಹೊನ್ಶು ದ್ವೀಪದ ಬೀದಿಗಳಲ್ಲಿ ಪಕ್ಷಿಗಳು ನಿಗೂಢ ರೀತಿಯಲ್ಲಿ ಈ ರೀತಿ ಸೇರಿ ವಿಚಿತ್ರವಾಗಿ ವರ್ತಿಸುತ್ತಿರುವುದರಿಂದ ಜನರು ಬೆಚ್ಚಿಬಿದ್ದಿದ್ದಾರೆ.
ಕಾಗೆಗಳ ಈ ವರ್ತನೆಗೆ ಇನ್ನೂಕಾರಣ ತಿಳಿದುಬಂದಿಲ್ಲ. ಭೂಕಂಪಗಳಂತಹ ನೈಸರ್ಗಿಕ ವಿಪತ್ತುಗಳ ಬಗ್ಗೆ ಸುಳಿವು ನೀಡುತ್ತಿವೆಯೇ ಎಂಬ ಹಲವರು ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ನೈಸರ್ಗಿಕ ವಿಕೋಪದ ಕುರಿತು ಪ್ರಾಣಿ, ಪಕ್ಷಿಗಳಿಗೆ ಮೊದಲೇ ಅರಿವಿಗೆ ಬರುವ ಕಾರಣ ಇದು ವಿನಾಶದ ಸೂಚನೆಯೇ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಟರ್ಕಿಯಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದ ಮುನ್ನ ಕೂಡ ಪಕ್ಷಿಗಳು ವಿಚಿತ್ರವಾಗಿ ವರ್ತಿಸುತ್ತಿದ್ದ ವಿಡಿಯೋ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಜಪಾನ್ನಲ್ಲಿಯೂ ಈಗ ಆತಂಕ ಮನೆಮಾಡಿದೆ.
https://twitter.com/QrmhPb4rtA6JxTH/status/1623206544916742145?ref_src=twsrc%5Etfw%7Ctwcamp%5Etweetembed%7Ctwterm%5E1623206544916742145%7Ctwgr%5E208801ca00a17d4a8b6bf75562113c7a85711e0a%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-thousands-of-crows-mysteriously-gather-at-a-japanese-island-near-kyoto-video-goes-viral