alex Certify ಹೊಗೆಯಲ್ಲಿ ಉಂಗುರ ಹೆಣೆಯುವ ಅಚ್ಚರಿಯ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಗೆಯಲ್ಲಿ ಉಂಗುರ ಹೆಣೆಯುವ ಅಚ್ಚರಿಯ ವಿಡಿಯೋ ವೈರಲ್​

ಸಾಮಾಜಿಕ ಮಾಧ್ಯಮವು ಅತಿಮಾನುಷ ಕೌಶಲಗಳನ್ನು ಒಳಗೊಂಡಿರುವ ಕೆಲವು ಆಕರ್ಷಕ ವಿಡಿಯೋಗಳ ಭಂಡಾರವಾಗಿದೆ. ಜನರಲ್ಲಿ ಅಡಗಿರುವ ಚಿತ್ರ-ವಿಚಿತ್ರ ಕೌಶಲಕ್ಕೆ ಇದು ವೇದಿಕೆಯಾಗಿದ್ದು, ಇವುಗಳ ಪೈಕಿ ಕೆಲವು ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ನೋಡಿ ನೆಟ್ಟಿಗರು ಈಗ ಮೂಗಿನ ಮೇಲೆ ಬೆರಳು ಇಡುವಂತಾಗಿದೆ.

ಈ ವೈರಲ್​ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ವಪೆಯ ಮೂಲಕ ಉಸಿರುಗಟ್ಟಿಸುವ ತಂತ್ರಗಳನ್ನು ಮಾಡುತ್ತಿರುವುದನ್ನು ನೋಡಬಹುದು. ಲ್ಯಾನ್ಸ್ ಎಂಬ ಬಳಕೆದಾರ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಒಬ್ಬ ವ್ಯಕ್ತಿಯು ವಪೆ ಬಳಸಿ ಹೊಗೆ ಉಗುಳಿ ನಂತರ ಆ ಹೊಗೆಯಿಂದ ಉಂಗುರ ಮಾಡುವುದನ್ನುನೋಡಬಹುದು. ಇದಲ್ಲದೇ ಹಲವಾರು ತಂತ್ರಗಳನ್ನು ಪ್ರದರ್ಶಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. 25-ಸೆಕೆಂಡ್‌ಗಳ ವಿಡಿಯೋದಲ್ಲಿ ಅವನು ಮಾಡುವ ವಿವಿಧ ತಂತ್ರಗಳನ್ನು ನೋಡಿ ಜನರು ಮರುಳಾಗುತ್ತಿದ್ದಾರೆ.

ಈ ವ್ಯಕ್ತಿ ಮೊದಲು ಹೊಗೆ ಉಂಗುರವನ್ನು ಎರಡು ಭಾಗಗಳಾಗಿ ವಿಂಗಡಿಸುತ್ತಾನೆ ಮತ್ತು ನಂತರ ನಾಲ್ಕರಿಂದ ಐದು ಭಾಗ ಮಾಡುತ್ತಾನೆ. ನಂತರ ಮುಂದಿನ ಹೊಗೆ ಉಂಗುರವನ್ನು ಎಡ, ಬಲ ಮತ್ತು ಮೇಲ್ಮುಖವಾಗಿ ಚಲಿಸುವ ಮೂರು ಉಂಗುರಗಳಾಗಿ ವಿಂಗಡಿಸುತ್ತಾನೆ. ಇದನ್ನು ನೋಡಿದರೆ ಭಲೆ ಭಲೆ ಎನ್ನದೇ ಇರಲಾರಿರಿ.

https://twitter.com/BornAKang/status/1605465226622672898?ref_src=twsrc%5Etfw%7Ctwcamp%5Etweetembed%7Ctwterm%5E1605465226622672898%7Ctwgr%5E0d68882880c19779e4f36ab86b637ea05bb54813%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-this-mans-insane-vaping-skills-have-twitter-in-shock-6680869.html

https://twitter.com/BornAKang/status/1605465226622672898?ref_src=twsrc%5Etfw%7Ctwcamp%5Etweetembed%7Ctwterm%5E1605728773885677568%7Ctwgr%5E0d68882880c19779e4f36ab86b637ea05bb54813%7Ctwcon%5Es2_&ref_url=https%3A%2F%2Fwww.news18.com%2Fbuzz%2Fwatch-this-mans-insane-vaping-skills-have-twitter-in-shock-6680869.html

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...