ಕೋಲ್ಕತಾ: ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಜ್ವರ ಬಹುತೇಕ ನಗರಗಳಲ್ಲಿ ಕಂಡುಬರುತ್ತಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ವಿಶ್ವಕಪ್‌ನ ಉತ್ಸಾಹವು ಭಾರತದಲ್ಲಿಯೂ ಮನೆಮಾಡಿದೆ. ಕ್ರಿಕೆಟ್ನಂತೆಯೇ ಹಲವು ಫುಟ್‌ಬಾಲ್ ಅಭಿಮಾನಿಗಳು ಗಲ್ಲಿಗಲ್ಲಿಗಳಲ್ಲಿ ಫುಟ್‌ಬಾಲ್ ಆಟ ಶುರು ಮಾಡಿದ್ದಾರೆ.
ಅದೇ ರೀತಿ ಕೋಲ್ಕತಾದ ‘ಫಿಫಾ ಗಲ್ಲಿ’ ಎಂಬ ಹೆಸರಿನ ರಸ್ತೆಯ ವಿಡಿಯೋ ಒಂದು ವೈರಲ್ ಆಗಿದೆ. ಫುಟ್‌ಬಾಲ್ ಕುರಿತ ಬರಹಗಳು ಈ ಗಲ್ಲಿಯಲ್ಲಿ ಕಾಣಬಹುದು. ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಫುಟ್‌ಬಾಲ್ ಆಡುತ್ತಿರುವುದನ್ನು ಇದರಲ್ಲಿ ನೋಡಬಹುದು.
ಛಾಯಾಗ್ರಾಹಕ ಸತ್ತಂ ಬಂಡೋಪಾಧ್ಯಾಯ ಅವರು ಈ ಗಲ್ಲಿಯ ವಿಡಿಯೋ ಶೇರ್ ಮಾಡಿದ್ದಾರೆ. ರಸ್ತೆಯ ಗೋಡೆಗಳ ಮೇಲೆ ಸುಂದರವಾದ ಭಿತ್ತಿಚಿತ್ರಗಳನ್ನು ಚಿತ್ರಿಸಲಾಗಿದೆ ಮತ್ತು ಜನರು ಉತ್ಸಾಹದಿಂದ ಫುಟ್‌ಬಾಲ್ ಆಡುವುದನ್ನು ಇದರಲ್ಲಿ ಕಾಣಬಹುದು, ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ಸೇರಿದಂತೆ ಜನಪ್ರಿಯ ಫುಟ್‌ಬಾಲ್ ಆಟಗಾರರ ಜರ್ಸಿ ಮತ್ತು ಪೋಸ್ಟರ್‌ಗಳನ್ನು ಮಕ್ಕಳು ಹಿಡಿದಿರುವುದನ್ನು ಕಾಣಬಹುದು.