alex Certify 33 ವರ್ಷದ ಮಗಳನ್ನು ನರ್ಸರಿ ಮಗುವಿನಂತೆ ಬಿಟ್ಟು ಬರುವ ತಂದೆ; ಭಾವುಕ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

33 ವರ್ಷದ ಮಗಳನ್ನು ನರ್ಸರಿ ಮಗುವಿನಂತೆ ಬಿಟ್ಟು ಬರುವ ತಂದೆ; ಭಾವುಕ ವಿಡಿಯೋ ವೈರಲ್

ತಂದೆಯೊಬ್ಬ ತನ್ನ 33 ವರ್ಷದ ಮಗಳನ್ನು ಚಿಕ್ಕಮಕ್ಕಳಂತೆಯೇ ರೈಲು ಹತ್ತಿಸಿ, ಆಕೆಯನ್ನು ಸೀಟಿನಲ್ಲಿ ಕುಳ್ಳರಿಸುವ ವಿಡಿಯೋ ವೈರಲ್​ ಆಗಿದೆ. ಇದನ್ನು ಕಂಟೆಂಟ್ ಕ್ರಿಯೇಟರ್ ಶೇರ್ ಮಾಡಿಕೊಂಡಿದೆ.

ಮಗಳನ್ನು ಮುಂಜಾನೆ ನಾಲ್ಕು ಗಂಟೆಗೆ ಏಳಿಸುವ ಅಪ್ಪ ಕಾರಿನಲ್ಲಿ ಆಕೆಯನ್ನು ರೈಲು ನಿಲ್ದಾಣದವರೆಗೆ ಬಿಟ್ಟು, ತಾವೂ ರೈಲಿನವರೆಗೆ ಹೋಗಿ ಸೀಟನ್ನು ಹುಡುಕಿ ಮಗಳನ್ನು ಕುಳ್ಳರಿಸಿ ವಾಪಸ್​ ಹೋಗುತ್ತಾರೆ. “ನನಗೆ 33 ವರ್ಷ ಮತ್ತು ನನ್ನ ತಂದೆ ನನ್ನನ್ನು ಶಿಶುವಿಹಾರಕ್ಕೆ ಕರೆದೊಯ್ಯುತ್ತಿದ್ದಂತೆಯೇ ಈಗಲೂ ನನ್ನನ್ನು ರೈಲ್ವೆ ನಿಲ್ದಾಣಕ್ಕೆ ಕರೆದೊಯ್ಯುತ್ತಾರೆ. ಬೆಳಿಗ್ಗೆ 4 ಗಂಟೆಗೆ ಎದ್ದು ನನ್ನನ್ನು ನಿಲ್ದಾಣಕ್ಕೆ ಕರೆದೊಯ್ಯುತ್ತಾರೆ ಎಂದು ಅದರಲ್ಲಿ ಬರೆಯಲಾಗಿದೆ.

“ಅವರಿಗೆ ತಿಳಿಯದಂತೆ ಈ ವಿಡಿಯೋ ತೆಗೆದಿದ್ದೆ. ಗೊತ್ತಾದಾಗ ಅವರು ಕಣ್ಣೀರು ಹಾಕಿದರು. ನನ್ನ ತಂದೆಯ ಬೇಷರತ್ತಾದ ಪ್ರೀತಿಯಿಂದ ನಾನು ಈ ವೀಡಿಯೊ ಮಾಡುವಾಗ ಅಳುತ್ತೇನೆ, ”ಎಂದು ವೀಡಿಯೊದ ಶೀರ್ಷಿಕೆಯನ್ನು ಓದಲಾಗಿದೆ. ಇದಕ್ಕೆ ಪರ- ವಿರೋಧ ಎರಡೂ ಅಭಿಪ್ರಾಯಗಳು ವ್ಯಕ್ತವಾಗಿದೆ. ಅಪ್ಪನ ಪ್ರೀತಿಯನ್ನು ಕೆಲವರು ಮೆಚ್ಚಿದರೆ, ಇದು ಅತಿಯಾಯಿತು. ಯಾವುದಕ್ಕೂ ಮಿತಿ ಇದ್ದರೆ ಚೆನ್ನ. ಇಂಥದ್ದನ್ನು ವಿಡಿಯೋ ಬೇರೆ ಮಾಡಿ ಹಾಕುವುದು ಹಾಸ್ಯಾಸ್ಪದ ಎಂದಿದ್ದಾರೆ.

https://www.youtube.com/watch?v=17Y1AvkpJ9s

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...